ಭಾರತ, ಮಾರ್ಚ್ 7 -- ಕೊಪ್ಪಳ: ವಿದೇಶಿ ಪ್ರವಾಸಿಗರ ಮೇಲೆ ಅಪರಿಚಿತ ದುರ್ಷ್ಕಮಿಗಳು ಹಲ್ಲೆ ನಡೆಸಿ, ಮಹಿಳೆಯ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸಮೀಪದ ಎಡದಂಡೆ ಕಾಲುವೆ ಬಳಿ ನಡೆದಿದೆ. ಮಾರ್ಚ್ 6ರ ರಾತ್ರಿ ವೇಳೆ ಈ ಘಟನೆ ನಡೆದಿದ್ದು, ಓರ್ವ ಪ್ರವಾಸಿಗ ನಾಪತ್ತೆಯಾಗಿದ್ದಾನೆ. ಸಾಣಾಪುರ ಗ್ರಾಮದ ಬಳಿ ಈ ಘಟನೆ ನಡೆದಿದೆ.

ರೆಸಾರ್ಟ್ ಮಾಲಿಕಳ ಜೊತೆ ರಾತ್ರಿ ಹೊತ್ತು ನಕ್ಷತ್ರ ವೀಕ್ಷಣೆಗೆಂದು ಪ್ರವಾಸಿಗರು ಕಾಲುಮೆ ಬಳಿ ಬಂದಿದ್ದರು. ರೆಸಾರ್ಟ್ ಓನರ್ ಹಾಗೂ 4 ಮಂದಿ ಪ್ರವಾಸಿಗರೂ ಕಾಲುಮೆ ಬಳಿ ಸಮಯ ಕಳೆಯುತ್ತಿದ್ದರು. 4 ಮಂದಿ ಪ್ರವಾಸಿಗರಲ್ಲಿ 2 ಭಾರತದವರು ಹಾಗೂ 2 ವಿದೇಶಿಗರಾಗಿದ್ದಾರೆ. ಇಸ್ರೇಲ್ ಮೂಲದ ನಾಮಾ, ಅಮೆರಿಕದ ಡ್ಯಾನಿಯೆಲ್‌, ಮಹಾರಾಷ್ಟ್ರದ ಪಂಕಜ್, ರೆಸಾರ್ಟ್ ಮಾಲಿಕರಾದ ಅಂಬಿಕಾ ನಾಯ್ಕ ಹಾಗೂ ಡಿ ಬಾಸ್ ಎನ್ನುವವರು ಸ್ಥಳದಲ್ಲಿದ್ದರು.

ಇವರೆಲ್ಲರೂ ನಕ್ಷತ್ರ ವೀಕ್ಷಿಸುತ್ತಾ, ಗೀಟಾರ್ ಬಾರಿಸುವ ಮೋಜಿನಲ್ಲಿ ತೊಡಗಿದ್ದರು. ಈ ವೇಳೆ ಬೈಕ್‌ನಲ್ಲಿ‌ಬಂದ‌ ಮೂವರು ಯುವಕರು ...