ಭಾರತ, ಏಪ್ರಿಲ್ 18 -- ಚಂದನವನದ ಖ್ಯಾತ ನಟ ಅರ್ಜುನ್ ಸರ್ಜಾ ತಮ್ಮ ಮೊದಲ ಮಗಳ ಮದುವೆ ಮಾಡಿ ವರ್ಷ ಕಳೆಯುವ ಮೊದಲೇ ಎರಡನೇ ಮಗಳ ಎಂಗೇಜ್‌ಮೆಂಟ್ ಮಾಡಿ ಮುಗಿಸಿದ್ದಾರೆ. ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅರ್ಜುನ್‌ ಕಳೆದ ವರ್ಷ ಜೂನ್ 10 ರಂದು ಉಮಾಪತಿ ರಾಮಯ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇದೀಗ ಎರಡನೇ ಪುತ್ರಿ ಅಂಜನಾ ಎಂಗೇಜ್‌ಮೆಂಟ್ ಸದ್ದಿಲ್ಲದೇ ನಡೆದಿದೆ.

ಅಂಜನಾ ವಿದೇಶಿ ಹುಡುಗನ ಕೈ ಹಿಡಿಯಲಿದ್ದಾರೆ. 13 ವರ್ಷಗಳ ಕಾಲ ಪ್ರೀತಿಸಿದ್ದ ವಿದೇಶಿ ಯುವಕನ ಜೊತೆ ಸದ್ಯದಲ್ಲೇ ಸಪ್ತಪದಿ ತುಳಿಯಲಿದ್ದಾರೆ ಅರ್ಜುನ್ ಸರ್ಜಾ ಎರಡನೇ ಪುತ್ರಿ. ಅರ್ಜುನ್‌-ನಿವೇದಿತಾ ಪುತ್ರಿ ಉಂಗುರ ಬದಲಿಸುವ ಕಾರ್ಯಕ್ರಮ ನಡೆದಿದ್ದು ಇಟಲಿಯ ಲೇಕ್ ಕೊಮೊದಲ್ಲಿ.

ಅಂಜನಾ ಎಂಗೇಜ್‌ಮೆಂಟ್ ಫೋಟೊಗಳು ಈಗ ವೈರಲ್ ಆಗಿದ್ದು, ಕುಟುಂಬದ ಆಪ್ತರು ಮಾತ್ರ ಭಾಗವಹಿಸಿದಂತೆ ಕಾಣುತ್ತಿದೆ. ಫೋಟೊದಲ್ಲಿ ಅರ್ಜುನ್‌ ಸರ್ಜಾ, ಪತ್ನಿ ನಿವೇದಿತಾ, ಐಶ್ವರ್ಯಾ ಅರ್ಜುನ್, ಪತಿ ಉಮಾಪತಿ ರಾಮಯ್ಯ ಅವರನ್ನು ಫೋಟೊದಲ್ಲಿ ಕಾಣಬಹುದು.

ಚಿತ್ರರಂಗದಿಂದ ದೂರವಿರುವ ಅ...