Bangalore, ಮೇ 14 -- ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ವಿದೇಶಿ ನೆಲದಲ್ಲಿ ಟೆಸ್ಟ್ ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಅವರ ಭಾರತದ ಹೊರಗೆ 29 ಶತಕ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ. ಅವರು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 51 ಶತಕಗಳನ್ನು ಗಳಿಸಿದ್ದಾರೆ.

'ದಿ ವಾಲ್' ಮತ್ತು 'ಮಿಸ್ಟರ್ ಡಿಪೆಂಡೆಬಲ್' ಎಂದು ಕರೆಯಲ್ಪಡುವ ರಾಹುಲ್ ದ್ರಾವಿಡ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು ವಿದೇಶಿ ನೆಲದಲ್ಲಿ 21 ಟೆಸ್ಟ್ ಶತಕ ಬಾರಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ ವಿದೇಶಿ ನೆಲದಲ್ಲಿ ಅತಿ ಹೆಚ್ಚು ಟೆಸ್ಟ್ ಶತಕ ಬಾರಿಸಿದವರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ತಮ್ಮ ದೇಶದಿಂದ ಹೊರಗೆ 20 ಸೆಂಚುರಿ ಚಚ್ಚಿದ್ದಾರೆ.

ವಿಶ್ವ ಶ್ರೇಷ್ಠ ಬ್ಯಾಟ್ಸ್​​ಮನ್​ಗಳಲ್ಲಿ ಒಬ್ಬರಾದ ಸುನಿಲ್ ಗವಾಸ್ಕರ್ ವಿದೇಶಿ ನೆಲದಲ್ಲಿ 18 ಟೆಸ್ಟ್ ಶತಕ ಗಳಿಸಿದ್ದಾರೆ.

ಇಂಗ್ಲೆಂಡ್​​ನ ಅಲೆಸ್ಟರ್ ಕುಕ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ವಿದೇಶಿ ನೆಲದಲ್ಲಿ 17 ಶತಕ ಸಿಡಿಸಿದ್ದಾರೆ.

ಶ್ರೇಷ್...