ಭಾರತ, ಫೆಬ್ರವರಿ 19 -- ಚಿಕನ್‌ನಿಂದ ಮಾಡಿದ ಎಲ್ಲಾ ಪಾಕವಿಧಾನಗಳು ರುಚಿಕರವಾಗಿರುತ್ತವೆ. ಕೇವಲ ಭಾರತವಷ್ಟೇ ಅಲ್ಲ ವಿದೇಶದಲ್ಲೂ ಅನೇಕ ಬಗೆಯ ಚಿಕನ್ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಮೆಕ್ಸಿಕನ್ ಚಿಕನ್ ತುಂಬಾ ಸರಳವಾಗಿ ತಯಾರಾಗುವ ಖಾದ್ಯ. ಇದು ನೋಡಲು ಚೈನೀಸ್ ಖಾದ್ಯದಂತೆ ಕಾಣುತ್ತದೆ. ಆದರೆ ಇದು ಮೆಕ್ಸಿಕೊದ ಜನಪ್ರಿಯ ಚಿಕನ್ ಭಕ್ಷ್ಯ. ಇದನ್ನು ಸಂಜೆ ಸ್ನಾಕ್ಸ್ ಆಗಿಯೂ ತಿನ್ನಬಹುದು. ಈ ರುಚಿಕರ ಖಾದ್ಯವನ್ನು ಮನೆಯಲ್ಲಿ ತಯಾರಿಸುವುದು ಸುಲಭ. ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು: ಮೂಳೆರಹಿತ ಕೋಳಿ ಮಾಂಸ - ಅರ್ಧ ಕೆಜಿ, ಕೆಂಪು ಮೆಣಸಿನಕಾಯಿ - 10, ಈರುಳ್ಳಿ ದಂಟು - 2, ಟೊಮೆಟೊ ಕೆಚಪ್ - 1 ಕಪ್, ಅಡುಗೆ ಎಣ್ಣೆ - 4 ಚಮಚ, ಮೆಣಸಿನ ಪುಡಿ - 1 ಚಮಚ, ಕ್ಯಾಪ್ಸಿಕಂ - 4 ಚಮಚ, ಬೆಳ್ಳುಳ್ಳಿ ಪೇಸ್ಟ್ - 1 ಚಮಚ, ವಿನೆಗರ್ - 2 ಚಮಚ, ಟೊಮೆಟೊ- 2, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಮೂಳೆಗಳಿಲ್ಲದ ಕೋಳಿ ಮಾಂಸದ ತುಂಡುಗಳನ್ನು ತೊಳೆದು ಪಕ್ಕಕ್ಕೆ ಇರಿಸಿ. ಅದನ್ನು ಮಧ್...