Bengaluru, ಫೆಬ್ರವರಿ 8 -- Thandel Box Office Collection Day 1: ಟಾಲಿವುಡ್‌ ನಟ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಅಭಿನಯದ ತಾಂಡೇಲ್ ಸಿನಿಮಾ ಫೆಬ್ರವರಿ 7ರಂದು ತೆರೆಗೆ ಬಂದಿದೆ. ತೆಲುಗು ರಾಜ್ಯಗಳಲ್ಲಿ ಅಲ್ಲಿನ ಪ್ರೇಕ್ಷಕರ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿದ್ದ ತಾಂಡೇಲ್‌, ಬಿಡುಗಡೆ ಬಳಿಕ ಎಲ್ಲೆಡೆಯಿಂದ ಪಾಸಿಟಿವ್‌ ಪ್ರತಿಕ್ರಿಯೆ ಪಡೆಯುತ್ತಿದೆ. ಅದೇ ರೀತಿ ಇದೇ ಸಿನಿಮಾ ಬಿಡುಗಡೆಗೂ ಮುನ್ನ, ತಮಿಳಿನ ಬಹುನಿರೀಕ್ಷಿತ ವಿಡಾಮುಯರ್ಚಿ ಸಿನಿಮಾ ಸಹ ಗುರುವಾರವೇ‌ (ಫೆ. 6) ರಿಲೀಸ್ ಆಗಿದೆ. ಬಾಕ್ಸ್‌ ಆಫೀಸ್‌ನಲ್ಲಿ ಈ ಚಿತ್ರವೂ ದಾಪುಗಾಲಿಟ್ಟಿದೆ. ಹಾಗಾದರೆ, ಈ ವಾರ ಬಿಡುಗಡೆ ಆದ ಸೌತ್‌ನ ಈ ಎರಡು ದೊಡ್ಡ ಸಿನಿಮಾಗಳ ಕಲೆಕ್ಷನ್‌ ರಿಪೋರ್ಟ್‌ ಎಷ್ಟು? ಇಲ್ಲಿದೆ ಮಾಹಿತಿ.

ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ನಟನೆಯ ತಾಂಡೇಲ್‌ ಸಿನಿಮಾ ಶುಕ್ರವಾರ (ಫೆಬ್ರವರಿ 7) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾವನ್ನು ಚಂದೂ ಮೊಂಡೆಟಿ ನಿರ್ದೇಶನ ಮಾಡಿದ್ದಾರೆ. ನೈಜ ಘಟನೆ ಆಧರಿತ ಈ ಸಿನಿಮಾ, ಮೊದಲ ದಿನ ಬಾ...