ಭಾರತ, ಫೆಬ್ರವರಿ 7 -- ಅಜಿತ್ ಕುಮಾರ್ ಮತ್ತು ತ್ರಿಶಾ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ 'ವಿಡಾಮುಯರ್ಚಿ' 1997ರಲ್ಲಿ ಬಿಡುಗಡೆಯಾದ ಅಮೇರಿಕನ್ ಚಲನಚಿತ್ರ ಬ್ರೇಕ್‌ಡೌನ್‌ ಚಿತ್ರದ ಕಥೆಯನ್ನು ಆಧರಿಸಿದೆ. ನಿರ್ದೇಶಕ ಮಾಗಿಜ್ ತಿರುಮೇನಿ ಈ ಕಥೆಯನ್ನು ಹೊಸ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಸಿನಿಮಾ ಸಾಕಷ್ಟು ಪಾಸಿಟಿವ್ ಟಾಕ್ ಪಡೆದುಕೊಂಡಿದ್ದರೂ ಸಹ ಬಾಕ್ಸ್‌ ಆಫೀಸ್‌ನಲ್ಲಿ ಹಣ ಗಳಿಸುವಲ್ಲಿ ಕೊಂಚ ವಿಫಲವಾಗಿದೆ. ಸಕ್ನಿಲ್ಕ್ ಪ್ರಕಾರ, ಅಜಿತ್ ಕುಮಾರ್ ಮತ್ತು ತ್ರಿಶಾ ಕೃಷ್ಣನ್ ನಟಿಸಿರುವ ಈ ಚಿತ್ರವು ತನ್ನ ಮೊದಲ ದಿನದಂದು ಭಾರತದಲ್ಲಿ 15.99 ಕೋಟಿ ಹಣ ಗಳಿಸಿದೆ ಎಂದು ಅಂದಾಜಿಸಲಾಗಿದೆ.

ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಂಡುಬಂದಿದ್ದು, ಬೆಳಿಗ್ಗೆ 58.81%, ಮಧ್ಯಾಹ್ನ 60.27% ಮತ್ತು ಸಂಜೆ ಪ್ರದರ್ಶನಗಳಿಗೆ 54.79%, ತಿರುಚ್ಚಿ ಮತ್ತು ಪಾಂಡಿಚೇರಿಯಲ್ಲಿ ಚೆನ್ನೈಗಿಂತ 92.00% ಮತ್ತು 91.67% ರಷ್ಟು ಹೆಚ್ಚಿನ ಗಳಿಕೆ ದಾಖಲಾಗಿದ್ದರೆ, ಚೆನ್ನೈನಲ್ಲಿ 88.33% ರಷ್ಟು ಗಳಿಕೆ ಕಂಡುಬಂದಿದೆ. ಅಜಿತ್...