ಭಾರತ, ಜುಲೈ 16 -- ಬೆಂಗಳೂರು: ಸೈನ್ಸ್‌ ಅಥವಾ ವಿಜ್ಞಾನ ಅನ್ನೋದು ಕಬ್ಬಿಣದ ಕಡಲೆ ಅಲ್ಲ. ಅರ್ಥ ಮಾಡಿಕೊಳ್ಳಲಾಗದ ವಿಷಯವೂ ಅಲ್ಲ. ಅದೊಂದು ವಿನೋದ. ಬಗೆದಷ್ಟೂ ತಿಳಿದುಕೊಳ್ಳುವ ಆಸಕ್ತಿ ನಿಮಗಿದ್ದರೆ, ನಿಮ್ಮ ಮಕ್ಕಳಿಗೆ ಕಲಿಸಬೇಕೆಂದಿದ್ದರೆ ಬೆಂಗಳೂರಿನ ಜಯನಗರದ ಹೃದಯ ಭಾಗದಲ್ಲಿರುವ "ದಿ ಪರಮ್ ಸೈನ್ಸ್ ಎಕ್ಸ್‌ಪೀರಿಯನ್ಸ್‌ ಸೆಂಟರ್‌ಗೆ" (ParSEC) ಬನ್ನಿ. ಈ ಕೇಂದ್ರದಲ್ಲಿ ಪ್ರಾಯೋಗಿಕ ಕಲಿಕೆಗೆ ಅವಕಾಶ ಇದ್ದು, ನಮ್ಮ ಜೀವನದಲ್ಲಿ ವಿಜ್ಞಾನ ಹೇಗೆ ಅಡಗಿದೆ ಎಂಬುದನ್ನು ಇಲ್ಲಿ ಅರಿಯಬಹುದಾಗಿದೆ. ಅಲ್ಲದೆ, ವಿಜ್ಞಾನದಲ್ಲಿ ತಂತ್ರಜ್ಞಾನದ ಬಳಕೆಯನ್ನೂ ಕಲಿಯಬಹುದಾಗಿದೆ.

ವಿಜ್ಞಾನ ನಮ್ಮ ದೈನಂದಿನ ಜೀವನದ ಭಾಗವಾಗಿದೆ. ಅದು ಎಷ್ಟು ಸರಳ ಎಂಬುದನ್ನು ಪಾರ್ಸೆಕ್ (ParSEC) ಸೆಂಟರ್‌ನಲ್ಲಿ ತಿಳಿಯಬಹುದು. ಇಂಥದ್ದೊಂದು ಪ್ರಾಯೋಗಿಕ ಗ್ಯಾಲರಿ ಬಹುಬೇಗ ಜನಪ್ರಿಯತೆ ಗಳಿಸಿದೆ. ಹಾಗಾದರೆ, ಈ ಪರಮ್‌ ಸೈನ್ಸ್‌ ಎಕ್ಸ್‌ಪೀರಿಯನ್ಸ್ ಕೇಂದ್ರವು ‌ಕೇವಲ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಮಾತ್ರ ಸೀಮಿತವೇ ಎಂದು ನೋಡುವುದಾದರೆ, ಇಲ್ಲ ಎಂಬ ಉತ್ತರ ಬ...