ಭಾರತ, ಫೆಬ್ರವರಿ 23 -- Vijaya Ekadashi 2025: ಹಿಂದೂ ಕ್ಯಾಲೆಂಡರ್ ಪ್ರಕಾರ, ವಿಜಯ ಏಕಾದಶಿ ವ್ರತವನ್ನು ಫಾಲ್ಗುಣ ತಿಂಗಳಲ್ಲಿ 2025ರ ಫೆಬ್ರವರಿ 24 ರಂದು ಆಚರಿಸಲಾಗುತ್ತದೆ. ವಿಜಯ ಏಕಾದಶಿ ಉಪವಾಸವನ್ನು ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಏಕಾದಶಿ ದಿನದಂದು ಆಚರಿಸಲಾಗುತ್ತದೆ. ಈ ಉಪವಾಸವನ್ನು ಆಚರಿಸುವ ಮೂಲಕ, ವಿಷ್ಣು ವಿಶೇಷ ಆಶೀರ್ವಾದವನ್ನು ನೀಡುತ್ತಾನೆ ಎಂದು ನಂಬಲಾಗಿದೆ. ಜೀವನದಲ್ಲಿನ ಎಲ್ಲಾ ದುಃಖಗಳನ್ನು ತೊಡೆದುಹಾಕುತ್ತಾನೆ, ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು, ಸಂತೋಷ ಹಾಗೂ ಸಮೃದ್ಧಿಯನ್ನು ನೀಡುತ್ತಾನೆ ಎಂದು ನಂಬಲಾಗಿದೆ. ಈ ದಿನ ಉಪವಾಸವನ್ನು ವಿಶೇಷವೆಂದು ಪರಿಗಣಿಸಲಾಗಿದೆ.

ವಿಜಯ ಏಕಾದಶಿಯ ದಿನ ಉಪವಾಸ ಮಾಡುವುದರಿಂದ ಜೀನದಲ್ಲಿನ ಪ್ರತಿಯೊಂದು ಸಮಸ್ಯೆ, ದುಃಖ ಹಾಗೂ ಅಡೆತಡೆಗಳಿಂದ ಬಿಡುಗಡೆ ಸಿಗುತ್ತದೆ ಎಂದು ಹೇಳಲಾಗುತ್ತದೆ. ಯುದ್ಧದಲ್ಲಿ ಲಂಕಾಪತಿ ರಾವಣನನ್ನು ಸೋಲಿಸಲು ಭಗವಾನ್ ರಾಮನು ವಿಜಯ ಏಕಾದಶಿಯಂದು ಉಪವಾಸವನ್ನು ಆಚರಿಸಿದನೆಂದು ನಂಬಲಾಗಿದೆ. ಈ ಉಪವಾಸವು ಎಲ್ಲಾ ಪಾಪಗಳಿಂದ ಮೋಕ್ಷವನ್ನು ತರ...