ಭಾರತ, ಫೆಬ್ರವರಿ 8 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 7ರ ಸಂಚಿಕೆಯಲ್ಲಿ ತಾನು ಕೊಟ್ಟ ಸೀರೆಯನ್ನು ಮರಳಿಸುವಂತೆ ಹಿಂಸೆ ಕೊಡುವ ಕಾಂತಮ್ಮ ಒಂದು ಕಡೆ, ತೊಡಲು ಬಟ್ಟೆ ಇಲ್ಲದೇ ಇರುವುದು ಇನ್ನೊಂದು ಕಡೆ. ಇದರಿಂದ ದಾರಿ ಕಾಣದ ಶ್ರಾವಣಿ ಮಾವನಿಗೆ ಒಂದು ಉಂಗುರ ಕೊಟ್ಟು ಇದನ್ನು ಕೊಟ್ಟು ಸೀರೆ ಹಾಗೂ ತನಗೆ ಬೇಕಾದ ವಸ್ತುಗಳನ್ನು ತರುವಂತೆ ಕೇಳಿಕೊಳ್ಳುತ್ತಾಳೆ. ಆರಂಭದಲ್ಲಿ ಒಪ್ಪದ ಪದ್ಮನಾಭ ನಂತರ ಬೇರೆ ದಾರಿ ಕಾಣದೆ ಆಯ್ತು ಶ್ರಾವಣಿ ಅಮ್ಮೋರೇ ಹೋಗಿ ತರುತ್ತೇನೆ ಎಂದು ಹೊರ ಹೋಗಿ ಒಂದಿಷ್ಟು ಬಟ್ಟೆ ಹಾಗೂ ಅಗತ್ಯ ವಸ್ತುಗಳನ್ನು ತರುತ್ತಾನೆ.

ಯಜಮಾನರು ಕೋಪದಲ್ಲಿ ಮನೆಯ ಒಳಗೆ ಬರಬೇಡ ಎಂದು ಹೇಳಿ ಹೋಗಿದ್ದರೂ ಅಲ್ಲಿಂದ ಹೊರಟು ಹೋಗದ ಸುಬ್ಬು ಗೇಟ್ ಬಳಿಯೇ ನಿಂತು ಕಾಯುತ್ತಿರುತ್ತಾನೆ. ಮನೆಯಿಂದ ಹೊರ ಬಂದ ಲಲಿತಾದೇವಿ ಸುಬ್ಬುವನ್ನು ಗೇಟ್ ಬಳಿ ನೋಡಿ ಒಳಗೆ ಬರುವಂತೆ ಹೇಳುತ್ತಾರೆ. ಆದರೆ ಅವರ ಮಾತಿಗೂ ಒಳ ಬರದ ಸುಬ್ಬು ತಾನು ಯಜಮಾನರು ಕರೆಯುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಹೇಳುತ್ತಾನೆ. ಲಲಿತಾದೇವಿ ಮಾತ್ರವಲ್...