ಭಾರತ, ಏಪ್ರಿಲ್ 30 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 29ರ ಸಂಚಿಕೆಯಲ್ಲಿ ಮಲಗಿದ್ದ ವಿಜಯಾಂಬಿಕಾ ಇದ್ದಕ್ಕಿದ್ದ ಹಾಗೆ ಗಾಬರಿಯಲ್ಲಿ ಎದ್ದೇಳುತ್ತಾಳೆ. ಅವಳಿಗೆ ತಾನು ಕಂಡಿದ್ದು ಕನಸೋ ನನಸೋ ಎನ್ನುವುದು ಅರ್ಥವಾಗುವುದಿಲ್ಲ. ನಂದಿನಿಯನ್ನು ತಾನೇ ಕೈಯಾರೆ ಸಾಯಿಸಿದ್ದೆ, ಆದರೆ ಅವಳು ಬದುಕಿ ಬರಲು ಹೇಗೆ ಸಾಧ್ಯ ಎಂದು ಯೋಚಿಸಿ ಗಾಬರಿಗೊಳ್ಳುತ್ತಾಳೆ. ಮಾತ್ರವಲ್ಲ ತಾನು ನಂದಿನಿಯನ್ನು ಹುಡುಕಿ ಹೊರಟಾಗ ಪದ್ಮನಾಭ ಹೇಗೆ ಅಡ್ಡ ಬಂದಿದ್ದು, ಅವನಿಗೆ ತನ್ನ ಬಗ್ಗೆ ಎಲ್ಲಾ ವಿಚಾರಗಳು ತಿಳಿದಿದ್ಯಾ ಅನ್ನೋ ಚಿಂತೆ ವಿಜಯಾಂಬಿಕಾಳನ್ನು ಕಾಡುತ್ತದೆ. ಅವಳಿಗೆ ಎಲ್ಲವೂ ಅಯೋಮಯವಾಗಿ ಕಾಡುತ್ತದೆ.

ಶ್ರಾವಣಿಯನ್ನು ರೂಮ್‌ನಿಂದ ಕರೆದುಕೊಂಡು ಬಂದು ಅವಳೆದುರು ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತು ದುರ್ಬಾರ್ ಮಾಡುವ ಕಾಂತಮ್ಮ ನೀನು ಬಡವನ ಮನೆಗೆ ಮದುವೆಯಾಗಿ ಬಂದಿರುವ ಕಡು ಬಡವಿ, ನೀನು ಮದುವೆಯಾಗಿ ಬಂದಾಗ ನಾನು ನಿಂಗೊಂದು ಸೀರೆ ಕೊಟ್ಟಿದ್ದೆ. ಆಗ ಸೀರೆಯನ್ನು ವಾಪಾಸ್ ಕೇಳಿದಾಗ ನೀವು ಮುಖ ಸಣ್ಣ ಮಾಡಿಕೊಂಡು ಅಳಲು ಶುರು ಮಾಡಿದ...