Vijayapura, ಏಪ್ರಿಲ್ 11 -- ವಚನಪಿತಾಮಹ ಎಂದೇ ಕರೆಯಿಸಿಕೊಳ್ಳುವ ಫಗು ಹಳಕಟ್ಟಿ ಅವರು ಶತಮಾನದ ಹಿಂದೆಯೇ ಸಮಾಜಕ್ಕಾಗಿ ಕೆಲಸ ಮಾಡಿದವರು. ವಿಜಯಪುರದಲ್ಲಿ ಡಾ. ಫ. ಗು. ಹಳಕಟ್ಟಿ ಅವರು ಸುಮಾರು 100 ವರ್ಷಗಳ ಹಿಂದೆಯೇ ಬಿಎಲ್‍ಇಡಿ ಸಂಸ್ಥೆ, ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ಮತ್ತು ಸಿದ್ಧೇಶ್ವರ ಸಂಸ್ಥೆಯನ್ನು ಕಟ್ಟಿ ಆಧುನಿಕ ವಿಜಯಪುರ ನಿರ್ಮಿಸಿದವರು. ಶಿಕ್ಷಣಕ್ಕೆ ಇನ್ನಿಲ್ಲದ ಒತ್ತು ನೀಡಿದವರು. ಈಗ ಅವರ ಹೆಸರಿನಲ್ಲಿಯೇ ವಿಜಯಪುರದಲ್ಲಿ ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರ ಸ್ಥಾಪನೆಗೊಂಡಿದೆ.

ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಅವರು ಕಾಲಗರ್ಭದಲ್ಲಿ ನಶಿಸಿ ಹೋಗುತ್ತಿದ್ದ ಬಸವಾದಿ ಶರಣರ ವಚನಗಳನ್ನು ಸಂಶೋಧಿಸಿ ಪ್ರಕಟಿಸುವ ಮೂಲಕ ವಚನಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಹಳಕಟ್ಟಿ ಅವರು ಸ್ಥಾಪಿಸಿದ ಬಿ.ಎಲ್.ಡಿ.ಇ ಸಂಸ್ಥೆ ಇಂದು ಬೃಹದಾಕಾರವಾಗಿ ಬೆಳೆದಿದ್ದು, ನಾಡು ಮತ್ತು ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಈಗ ಈ ಸಂಸ್ಥೆಗೆ ವಚನ ಸಾಹಿತ್ಯಶ್ರೀ ಪುರಸ್ಕಾರ ದೊ...