ಭಾರತ, ಫೆಬ್ರವರಿ 11 -- Bagappa Harijana Murder: ಹಿಂದೊಮ್ಮೆ ವಿಜಯಪುರವನ್ನೇ ತಲ್ಲಣಗೊಳಿಸಿದ್ದ ಭೀಮಾತೀರದ ಹಂತಕ ಕುಖ್ಯಾತಿಯ ಬಾಗಪ್ಪ ಹರಿಜನ ಬರ್ಬರವಾಗಿ ಹತ್ಯೆಗೀಡಾಗಿದ್ದಾನೆ. ವಿಜಯಪುರದ ಮದೀನಾ ನಗರದಲ್ಲಿ ಇಂದು (ಫೆ 11) ರಾತ್ರಿ 9.30ರ ಸುಮಾರಿಗೆ ಈ ಹತ್ಯೆ ನಡೆದಿದ್ದು, 15ಕ್ಕೂ ಹೆಚ್ಚು ಯುವಕರ ತಂಡ ಈ ಕೃತ್ಯವೆಸಗಿದೆ ಎಂದು ಟಿವಿ9 ಕನ್ನಡ ವರದಿ ಮಾಡಿದೆ, 6ಕ್ಕೂ ಹೆಚ್ಚು ಬೈಕುಗಳಲ್ಲಿ ಬಂದ ದುಷ್ಕರ್ಮಿಗಳ ತಂಡ ಬಾಗಪ್ಪನ ಮೇಲೆ ಯೋಜಿತ ದಾಳಿ ನಡೆಸಿದ್ದು, ಮುಖ, ತಲೆ ಸೇರಿ ಸಿಕ್ಕ ಸಿಕ್ಕಲ್ಲಿ ಮಾರಕಾಸ್ತ್ರಗಳಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಬಾಗಪ್ಪ ಹರಿಜನ ರಸ್ತೆಯಲ್ಲಿ ಬಿದ್ದು ಮೃತಪಟ್ಟಿದ್ದಾನೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಇದಕ್ಕೂ ಮೊದಲು, ಕೆಲವು ದಿನಗಳ ಹಿಂದೆ ಕೋರ್ಟ್ ಆವರಣದಲ್ಲಿ ಬಾಗಪ್ಪ ಹರಿಜನ ಮೇಲೆ ಗುಂಡಿನ ದಾಳಿ ನಡೆದಿತ್ತು. ಆಗ ಬಾಗಪ್ಪ ಬಚಾವ್ ಆಗಿದ್ದ. ಈ ಬಾರಿ ಯೋಜಿತ ರೀತಿಯಲ್ಲೇ ದಾಳಿ ನಡೆಸಿ ಹತ್ಯೆ ಮಾಡುವಲ್ಲಿ ಹಂತಕರು ಯಶಸ್ವಿಯಾಗಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ವಿಜಯಪು...