ಭಾರತ, ಏಪ್ರಿಲ್ 21 -- ಏಪ್ರಿಲ್ 18ರಂದು ಪಂಜಾಬ್ ಕಿಂಗ್ಸ್ ವಿರುದ್ಧ ತವರಿನಲ್ಲಿ ಆರ್​ಸಿಬಿ ಸೋತಿತ್ತು. ಇದಾದ ಎರಡೇ ದಿನಗಳ ಅಂತರದಲ್ಲಿ ಬೆಂಗಳೂರು ಅವರದ್ದೇ ತವರಿನಲ್ಲಿ ಪಂಜಾಬ್ ಎದುರು ಗೆದ್ದು ಸೇಡು ತೀರಿಸಿಕೊಂಡಿದೆ. ಈ ಪಂದ್ಯ ಸೇಡಿನ ಸಮರವಾಗಲು ಕಾರಣ ಏನೆಂದರೆ ಎಂ ಚಿನ್ನಸ್ವಾಮಿ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಸೋತ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಸೌಂಡ್ ಕೇಳಿಸ್ತಿಲ್ಲ ಎನ್ನುವ ರೀತಿ ಸಿಗ್ನಲ್ ಮಾಡಿದ್ದರು. ಇದು ಆರ್​ಸಿಬಿ ಮತ್ತು ತಂಡದ ಅಭಿಮಾನಿಗಳನ್ನು ಕೆರಳಿಸಿತ್ತು. ಇದೇ ಕಾರಣಕ್ಕೆ ಸೇಡಿನ ಸಮರದೊಂದಿಗೆ ಕಣಕ್ಕಿಳಿದಿದ್ದ ಆರ್​ಸಿಬಿ ಮುಲ್ಲನ್​ಪುರದಲ್ಲಿ ಅದ್ಭುತ ಗೆಲುವು ದಾಖಲಿಸಿತು.

ಆರಂಭಿಕನಾಗಿ ಕಣಕ್ಕಿಳಿದು ಅಜೇಯರಾಗಿ ಉಳಿದ ವಿರಾಟ್ ಕೊಹ್ಲಿ, 19ನೇ ಓವರ್​​ನ 5ನೇ ಎಸೆತದಲ್ಲಿ ಜಿತೇಶ್ ಶರ್ಮಾ ಗೆಲುವಿನ ಸಿಕ್ಸರ್​ ಸಿಡಿಸುತ್ತಿದ್ದಂತೆಯೇ ಅಪರೂಪದ ಸಂಭ್ರಮಾಚರಣೆಯೊಂದಿಗೆ ಪಿಬಿಕೆಎಸ್ ತಂಡದ ನಾಯಕ ಶ್ರೇಯಸ್ ಅಯ್ಯರ್​ನನ್ನು ಕಿಚಾಯಿಸಿದರು. ಗೇಲಿ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಆದರೆ ಕೊಹ್ಲಿ ...