ಭಾರತ, ಮಾರ್ಚ್ 27 -- ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ (CSK vs MI) ನಡುವಿನ ಐಪಿಎಲ್‌ ಪಂದ್ಯದಲ್ಲಿ ಮುಂಬೈ ತಂಡ ಸೋತರೂ, ತಂಡದ ಸ್ಪಿನ್ನರ್ ವಿಘ್ನೇಶ್ ಪುತ್ತೂರು‌ (Vignesh Puthur) ಭಾರಿ ಗಮನ ಸೆಳೆದರು. ದಿನಬೆಳಗಾಗುವುದರೊಳಗೆ ಕ್ರೀಡಾ ಲೋಕದಲ್ಲಿ ಹೊಸ ಸೆನ್ಸೇಷನ್‌ ಸೃಷ್ಟಿಸಿದರು. ಕೇರಳದ ಮಲಪ್ಪುರಂನ ಸಾಮಾನ್ಯ ಆಟೋ ಚಾಲಕನ ಮಗನೊಬ್ಬ, ಮುಂಬೈ ಇಂಡಿಯನ್ಸ್‌ ಎಂಬ ಪ್ರತಿಷ್ಠಿತ ತಂಡದಲ್ಲಿ ಆಡುವುದು ಮಾತ್ರವಲ್ಲದೆ, ಘಟಾನುಘಟಿ ಬ್ಯಾಟರ್‌ಗಳ ವಿಕೆಟ್‌ ಪಡೆಯುವುದೆಂದರೆ ಸಾಧಾರಣ ವಿಷಯವೇನಲ್ಲ. 24 ವರ್ಷದ ಆಟಗಾರನಲ್ಲಿ ಏನೋ ಒಂದು ಪ್ರತಿಭೆ ಇದೆ ಎಂಬುದನ್ನು ಗುರುತಿಸುವುದರಲ್ಲಿ ಮುಂಬೈ ಇಂಡಿಯನ್ಸ್‌ ಪಾಲು ಎಷ್ಟಿದೆಯೋ, ಅದಕ್ಕೆ ಕನ್ನಡಿಗ ಹಾಗೂ ಕರ್ನಾಟಕ ಕಂಡ ದಿಗ್ಗಜ ಕ್ರಿಕೆಟಿಗ ವಿನಯ್‌ ಕುಮಾರ್‌ ಕೊಡುಗೆ ಕೂಡಾ ಅಷ್ಟೇ ಇದೆ.

ಐಪಿಎಲ್‌ನಂತೆಯೇ ದಕ್ಷಿಣ ಆಫ್ರಿಕಾದಲ್ಲಿ ನಡೆಯುವ SA20ಗಾಗಿ ಎಂಐ ಕೇಪ್ ಟೌನ್ ತಂಡವು ದಕ್ಷಿಣ ಆಫ್ರಿಕಾದಲ್ಲಿ ಒಟ್ಟುಗೂಡಲು ಸಜ್ಜಾಗಿತ್ತು. ಆಗ ವಿಘ್ನೇಶ್ ಅವರನ್ನು ನೆಟ್...