ಭಾರತ, ಮಾರ್ಚ್ 25 -- ಮುಂಬೈ ಇಂಡಿಯನ್ಸ್ ತಂಡದ ಯುವ ಆಟಗಾರ ವಿಘ್ನೇಶ್ ಪುತ್ತೂರ್‌ (Vignesh Puthur), ದೇಶದಲ್ಲಿ ಈಗ ಹೊಸ ಸೆನ್ಸೇಷನ್‌ ಸೃಷ್ಟಿಸಿದ್ದಾರೆ. ಸಿಎಸ್‌ಕೆ ತಂಡದ ವಿರುದ್ಧದ ಪಂದ್ಯದಲ್ಲಿ ಪ್ರಮುಖ ಬ್ಯಾಟರ್‌ಗಳ ವಿಕೆಟ್‌ ಪಡೆದು ಮಿಂಚಿದ ಕೇರಳದ ಹುಡುಗ, ಪಂದ್ಯ ಮುಗಿದು ದಿನಗಳು ಉರುಳುತ್ತಿದ್ದರೂ ಸುದ್ದಿಯಲ್ಲಿದ್ದಾರೆ. ಪಂದ್ಯದಲ್ಲಿ ಮುಂಬೈ ತಂಡ ಸೋತರೂ, ವಿಘ್ನೇಶ್‌ ಹಲವರ ಹೃದಯ ಗೆದ್ದಿದ್ದಾರೆ. ಹೊರಗಿನವರು ಬೇಕಿಲ್ಲ. ಎದುರಾಳಿ ತಂಡವಾದ ಸಿಎಸ್‌ಕೆ ದಿಗ್ಗಜ ಆಟಗಾರ ಧೋನಿ ಕೂಡಾ ಕೇರಳ ಹುಡುಗನನ್ನು ಮೆಚ್ಚಿಕೊಂಡಿದ್ದಾರೆ. ಪಂದ್ಯದ ಬಳಿಕ ವಿಘ್ನೇಶ್‌ ಜೊತೆಗೆ ಮೈದಾನದಲ್ಲಿ ಧೋನಿ ಹತ್ತಿರದಿಂದ ಮಾತನಾಡುವ ದೃಶ್ಯಗಳು ವೈರಲ್‌ ಆಗಿದ್ದವು.

ಸೀನಿಯರ್ ಮಟ್ಟದಲ್ಲಿ ಎಂದಿಗೂ ಟಿ20 ಪಂದ್ಯವನ್ನು ಆಡದ ಕೇರಳದ 24 ವರ್ಷದ ಆಟಗಾರ, ಚೆಪಾಕ್‌ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಮೂರು ಪ್ರಮುಖ ವಿಕೆಟ್‌ಗಳನ್ನು ಪಡೆದರು. ಆ ಮೂಲಕ ಮಧ್ಯಮ ಓವರ್‌ಗಳಲ್ಲಿ ಚೆನ್ನೈ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು. ಯುವ ಆಟಗಾರನ ಬೌಲಿಂಗ್‌ ಅನ್ನ...