ಭಾರತ, ಏಪ್ರಿಲ್ 6 -- Jacqueline Fernandez mother dies: ಜನಪ್ರಿಯ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ತಾಯಿ ಕಿಮ್ ಫರ್ನಾಂಡಿಸ್ ಇಂದು (ಮಾರ್ಚ್ 6) ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಈ ವಿಚಾರವನ್ನು ಜಾಕ್ವೆಲಿನ್ ಅವರ ಆಪ್ತ ಮೂಲಗಳು ಖಚಿತ ಪಡಿಸಿವೆ. ಪಾರ್ಶ್ವವಾಯುವಿಗೆ ತುತ್ತಾಗಿದ್ದ ಅವರು ಕಳೆದ ತಿಂಗಳು ಆಸ್ಪತ್ರೆಗೆ ದಾಖಲಾಗಿದ್ದರು.

ಐಸಿಯುನಲ್ಲಿ ಕಿಮ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಹಾರ್ಟ್ ಸ್ಟ್ರೋಕ್ ಉಂಟಾದ ಕಾರಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ತಾಯಿ ಆಸ್ಪತ್ರೆಯಲ್ಲಿರುವ ಹಿನ್ನೆಲೆ ಜಾಕ್ವೆಲಿನ್ ಆಗಾಗ ಲೀಲಾವತಿ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು ಎನ್ನಲಾಗುತ್ತಿದೆ.

ಮಾರ್ಚ್‌ನಲ್ಲಿ ಗುವಾಹಟಿಯಲ್ಲಿ ನಡೆದ ಐಪಿಎಲ್ ಉದ್ಫಾಟನಾ ಸಮಾರಂಭದಲ್ಲಿ ಜಾಕ್ವೆಲಿನ್ ಭಾಗವಹಿಸಬೇಕಿತ್ತು. ಆದರೆ ತಾಯಿಯ ಅನಾರೋಗ್ಯದ ಕಾರಣ ಆಕೆ ಆ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. 'ತಾಯಿ ಐಸಿಯಂನಲ್ಲಿರುವ ಕಾರಣ ಜಾಕ್ವೆಲಿನ್‌ಗೆ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಆಕ...