Bangalore, ಮಾರ್ಚ್ 27 -- Veera Dheera Sooran Movie: ನಟ ವಿಕ್ರಮ್‌ ಅವರ ಬಹುನಿರೀಕ್ಷಿತ ಸಿನಿಮಾ ವೀರ ಧೀರ ಸೂರನ್‌. ಇಂದು (ಗುರುವಾರ) ಈ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಬೇಕಿತ್ತು. ಅಭಿಮಾನಿಗಳು ಈ ಸಿನಿಮಾ ನೋಡಿ ಹಬ್ಬ ಮಾಡಲು ಕಾಯುತ್ತಿದ್ದರು. ಆದರೆ, ಈ ಸಿನಿಮಾಕ್ಕೆ ಕಾನೂನು ಸಂಕಷ್ಟ ಎದುರಾಗಿದೆ. ಹೀಗಾಗಿ, ಈ ಸಿನಿಮಾದ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ನಿರ್ಮಾಣ ಸಂಸ್ಥೆಯಾದ ಎಚ್‌ಆರ್‌ ಪಿಕ್ಚರ್ಸ್‌ನೊಂದಿಗಿನ ತಮ್ಮ ಸಮಸ್ಯೆಗಳು ಬಗೆಹರಿಯುವವರೆಗೆ ಚಿತ್ರದ ಬಿಡುಗಡೆಯನ್ನು ಸ್ಥಗಿತಗೊಳಿಸುವಂತೆ ಬಿ4ಯು ಬುಧವಾರ ದೆಹಲಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದೆ ಎಂದು ಟೈಮ್ಸ್‌ ನೌ ವರದಿ ಮಾಡಿದೆ.

ಗುರುವಾರವಾದ ಇಂದು ಈ ಸಿನಿಮಾ ಬಿಡುಗಡೆಯಾಗಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ಅತ್ಯುತ್ತಮವಾಗಿ ಗಳಿಕೆ ಮಾಡಿತ್ತು. ಪಿವಿಆರ್ ಮತ್ತು ಸಿನೆಪೊಲಿಸ್ ಚಿತ್ರಮಂದಿರಗಳಲ್ಲಿ ಬೆಳಗ್ಗಿನ ಶೋ ರದ್ದುಪಡಿಸಲಾಗಿದೆ. ಮಧ್ಯಾಹ್ನದ ಶೋಗಳು ಆರಂಭವಾಗುವ ನಿರೀಕ್ಷೆಯಿದೆ. ಥಿಯೇಟರ್‌ನಲ್ಲಿ ಬಿಡುಗಡ...