ಭಾರತ, ಫೆಬ್ರವರಿ 7 -- ತೆಲುಗು ಭಾಷೆಯ ಜನಪ್ರಿಯ ನಟ, ಕುಟುಂಬ ಸಮೇತ ನೋಡಬಹುದಾದ ಹಲವು ಚಿತ್ರಗಳನ್ನು ಕೊಟ್ಟಿರುವ 'ವಿಕ್ಟರಿ' ವೆಂಕಟೇಶ್ ಅಭಿನಯದ ಆಕ್ಷನ್ ಕಾಮಿಡಿ ತೆಲುಗು ಸಿನಿಮಾ 'ಸಂಕ್ರಾತಿಕಿ ವಸ್ತುನ್ನಾಂ' ಶೀಘ್ರದಲ್ಲಿಯೇ ಒಟಿಟಿಗೆ ಬರಲಿದೆ. 2025ರ ಜನವರಿಯಲ್ಲಿ ಸಂಕ್ರಾಂತಿಯ ಸಂದರ್ಭದಲ್ಲೇ ಸಿನಿಮಾ ಬಿಡುಗಡೆಯಾಗಿದೆ. ಜನವರಿ 14, 2025 ರಂದು ಬಿಡುಗಡೆಯಾದಾಗಿನಿಂದ ಸಾಕಷ್ಟು ಜನ ಈ ಸಿನಿಮಾ ವೀಕ್ಷಿಸಿದ್ದಾರೆ. ಈಗ, ಚಿತ್ರವು OTTಯಲ್ಲಿ ಪ್ರಸಾರವಾಗಲು ತಯಾರಾಗಿದೆ. ನೀವು ಈ ಸಿನಿಮಾವನ್ನು ಥಿಯೇಟರ್‍‌ಗಳಲ್ಲಿ ನೋಡಿಲ್ಲ ಎಂದಾದರೆ ಒಟಿಟಿಯಲ್ಲಿ ವೀಕ್ಷಿಸಬಹುದು. ಹಾಸ್ಯದೊಂದಿಗೆ ರೋಮಾಂಚಕಾರಿ ಸಾಹಸ ಸನ್ನಿವೇಶಗಳನ್ನು ಹೊಂದಿರುವ ಚಿತ್ರ ಎಲ್ಲರಿಗೂ ಇಷ್ಟವಾಗುವಂತಿದೆ. ಭಾರತ ಮತ್ತು ಅದರಾಚೆಗಿನ ವೀಕ್ಷಕರನ್ನೂ ಈ ಸಿನಿಮಾ ಆಕರ್ಷಿಸಿದೆ.

ಬಾಕ್ಸ್ ಆಫೀಸ್‌ನಲ್ಲಿಯೂ ಈ ಸಿನಿಮಾ ಸದ್ದು ಮಾಡಿದೆ. ಭಾರತದಲ್ಲಿ 176.35 ಕೋಟಿಗೂ ಹೆಚ್ಚು ಗಳಿಸಿದೆ. ಸಾಗರೋತ್ತರ ಮಾರುಕಟ್ಟೆಯಲ್ಲಿ 220 ಕೋಟಿಗೂ ಹೆಚ್ಚು ಆದಾಯ ಬಂದಿದೆ ಎಂದು ಹಲವು ಮಾಧ...