Bengaluru, ಮೇ 26 -- ಅರಳಿ ಮರ, ತೆಂಗಿನ ಮರ, ಶಮಿ ವೃಕ್ಷ, ಬಾಳೆ ಗಿಡ ಸೇರಿದಂತೆ ಹಿಂದೂ ಸಂಸ್ಕೃತಿಯಲ್ಲಿ ನಾವು ಅನೇಕ ಮರ ಗಿಡಗಳನ್ನು ದೇವರ ರೂಪದಲ್ಲಿ ನೋಡುತ್ತೇವೆ. ದೈವಿಕ ಗುಣಗಳೊಂದಿಗೆ ಕೆಲವು ಗಿಡಗಳಂತೂ ಔಷಧೀಯ ಗುಣಗಳನ್ನು ಹೊಂದಿದೆ. ವೇದಕಾಲದಿಂದ ಹಿಡಿದು ಈಗನ ವೈದ್ಯಕೀಯ ಕ್ಷೇತ್ರದವರೆಗೂ ಎಲ್ಲರೂ ಈ ವಿಚಾರವನ್ನು ನಂಬುತ್ತಾರೆ. ಇಂಥಹ ಸಸ್ಯಗಳಲ್ಲಿ ಸ್ನೇಕ್‌ ಪ್ಲಾಂಟ್‌ ಕೂಡಾ ಒಂದು.

ಸ್ನೇಕ್‌ ಪ್ಲಾಂಟ್‌, ವಾಸ್ತು ಪ್ರಕಾರ ಮಾತ್ರವಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಬಹಳ ಒಳ್ಳೆಯದು. ಈ ಸಸ್ಯವನ್ನು ಮನೆಯಲಿ ಇಟ್ಟರೆ ಹಾವು ಬರುತ್ತದೆ ಎಂದು ಕೆಲವರು ತಪ್ಪು ತಿಳಿದಿದ್ದಾರೆ. ಆದರೆ ಅದು ಸುಳ್ಳು, ಸ್ನೇಕ್‌ ಪ್ಲಾಂಟ್‌ ಎಂದರೆ ಹಾವು ಬರುತ್ತದೆ ಎಂದು ಅರ್ಥವಲ್ಲ. ಈ ಗಿಡಗಳ ಎಲೆಗಳನ್ನು ನೋಡಲು ಹಾವಿನಂತೆ ಕಾಣುವುದರಿಂದ ಇದನ್ನು ಸ್ನೇಕ್‌ ಪ್ಲಾಂಟ್‌ ಎಂದು ಕರೆಯುತ್ತಾರೆ. ಆಂಗ್ಲ ಭಾಷೆಯಲ್ಲಿ Sansevieria trifasciata ಎನ್ನಲಾಗುತ್ತದೆ. ಸ್ನೇಕ್‌ ಪ್ಲಾಂಟನ್ನು ಮನೆಯಲ್ಲಿ ಇಡುವುದರಿಂದ ಬಹಳ ಒಳ್ಳೆಯದು. ಮನೆಯಲ್ಲಿ ಸುಖ ಶ...