ಭಾರತ, ಫೆಬ್ರವರಿ 19 -- ನಮ್ಮ ಜೀವನಕ್ಕೆ ಯಾವುದು ಒಳಿತು, ಯಾವುದು ಕೆಡುಕು ಎಂಬುದು ನಾವು ಮಾಡುವ ಕೆಲಸಗಳು ಹಾಗೂ ನಮ್ಮ ಅದೃಷ್ಟವನ್ನು ಆಧರಿಸಿರುತ್ತವೆ ಎಂದು ಹೇಳಲಾಗುತ್ತದೆ. ಅದಾಗ್ಯೂ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ನಾಶ ಮಾಡುವ ಮತ್ತು ಮನೆಗೆ ಅದೃಷ್ಟ ತರುವ 5 ಗಿಡಗಳಿವೆ. ಮಹಾಭಾರತದಲ್ಲಿ ಕೂಡ ಉಲ್ಲೇಖಿಸಿರುವ ಈ ಗಿಡಗಳು ದೈವಿಕ ಶಕ್ತಿಯಿಂದ ಕೂಡಿರುವ ಕಾರಣ ಇದನ್ನು ಮನೆಯ ಬಳಿ ನೆಡುವುದರಿಂದ ಒಳಿತಾಗುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.

ಸನಾತನ ಧರ್ಮದಲ್ಲಿ ಪ್ರಕೃತಿಗೆ ವಿಶೇಷ ಪ್ರಾಮುಖ್ಯ ನೀಡಲಾಗಿದೆ. ನದಿಗಳಿಗೆ ತಾಯಿಯ ಸ್ಥಾನಮಾನ ನೀಡಲಾಗಿದೆ. ಸಸ್ಯಗಳನ್ನು ದೇವರಂತೆ ಪೂಜಿಸುವ ಕ್ರಮವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಒಂದು ಬೇವಿನ ಗಿಡ, ಹತ್ತು ಹುಣಸೆ ಗಿಡ, ಮೂರು ವೀಳ್ಯದೆಲೆ ಬಳ್ಳಿ, ಮೂರು ಅಶ್ಚತ್ಥ ಗಿಡ ಮತ್ತು ಐದು ಮಾವಿನ ಗಿಡಗಳನ್ನು ನೆಟ್ಟರೆ ಅವನನ್ನು ಸದ್ಗುಣಶೀಲ ಎಂದು ಪರಿಗಣಿಸಲಾಗುತ್ತದೆ.

ಅಶ್ವತ್ಥ ಗಿಡಅಶ್ವತ್ಥ ಗಿಡವು ಮಹಾಭಾರತಕ್ಕೆ ಸಂಬಂಧಿಸಿದೆ ...