ಭಾರತ, ಫೆಬ್ರವರಿ 13 -- ಸಾಮಾನ್ಯವಾಗಿ ಕುಟುಂಬದಲ್ಲಿ ಮಾನಸಿಕ ಒತ್ತಡವು ಮೂರನೆಯ ವ್ಯಕ್ತಿಯ ಕಾರಣದಿಂದ ಉಂಟಾಗುತ್ತದೆ. ಇದಕ್ಕೆ ಕಾರಣ ಬ್ರಹ್ಮನ ಶಾಪ ಎಂದು ಧಾರ್ಮಿಕ ಗ್ರಂಥಗಳಿಂದ ತಿಳಿದು ಬರುತ್ತದೆ. ಪ್ರತಿಯೊಂದು ಗ್ರಹಗಳು ಒತ್ತಡವನ್ನು ಉಂಟು ಮಾಡಲು ನೇರವಾಗಿ ಕೆಲವೊಮ್ಮೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಉದಾಹರಣೆಗೆ ಜನ್ಮ ಕುಂಡಲಿಯಲ್ಲಿ ರವಿ ಗ್ರಹವು ಉತ್ತಮ ಸ್ಥಿತಿಯಲ್ಲಿ ಇದ್ದರೆ ಅತಿಯಾದ ಆತ್ಮವಿಶ್ವಾಸವಿರುತ್ತದೆ. ಇದರಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ಮಾನಸಿಕ ಒತ್ತಡಕ್ಕೆ ಒಳಗಾಗುತ್ತೇವೆ. ಇದೇ ರೀತಿಯಲ್ಲಿ ಯಾವುದೇ ಜಾತಕದಲ್ಲಿ ರವಿಯು ದುರ್ಬಲದನಾಗಿದ್ದರೆ ಆತ್ಮವಿಶ್ವಾಸದ ಕೊರತೆ ಇರುತ್ತದೆ. ಇದರಿಂದ ಯಾವುದೇ ವಿಚಾರವಾದರೂ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಲೂ ಮಾನಸಿಕ ಒತ್ತಡವು ಉಂಟಾಗುತ್ತದೆ. ಆದ್ದರಿಂದ ಮೊದಲು ಜನ್ಮ ಕುಂಡಲಿಯನ್ನು ಅಧ್ಯಯನ ಮಾಡಿ ಮಾನಸಿಕ ಒತ್ತಡಕ್ಕೆ ಇರುವ ಕಾರಣವನ್ನು ತಿಳಿಯಬೇಕು.

ಜನ್ಮ ಕುಂಡಲಿಯಲ್ಲಿ ರಾಹು ಇರುವ ಸ್ಥಾನಕ್ಕೆ ಅನುಗುಣವಾಗಿ...