Bengaluru, ಏಪ್ರಿಲ್ 16 -- ಮನೆ ಬಾಗಿಲು ವಾಸ್ತು: ಮನೆಗಳಲ್ಲಿ ಇರುವ ಬಾಗಿಲುಗಳು ನಮ್ಮ ಜೀವನದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮವನ್ನು ಬೀರುತ್ತದೆ. ಪರೋಕ್ಷವಾಗಿ ಇದು ಸಂಖ್ಯಾಶಾಸ್ತ್ರವನ್ನು ಆಧರಿಸಿದೆ. ಸಂಖ್ಯಾಶಾಸ್ತ್ರದಲ್ಲಿ ಪ್ರತಿಯೊಂದು ಸಂಖ್ಯೆಯನ್ನೂ ಪ್ರತ್ಯೇಕವಾದ ಗ್ರಹಗಳನ್ನು ಸೂಚಿಸುತ್ತದೆ. ಬಾಗಿಲುಗಳನ್ನು ಮರದಲ್ಲಿ ಮಾಡಲಾಗುತ್ತದೆ. ಆದ್ದರಿಂದ ಇದು ನಕ್ಷತ್ರವನ್ನು ಪ್ರತಿನಿಧಿಸುತ್ತದೆ. ಪ್ರತಿಯೊಂದು ನಕ್ಷತ್ರಗಳಿಗೂ ಪ್ರತ್ಯೇಕವಾದ ಸಸ್ಯ ಸಂಕುಲವಿದೆ. 1 ರವಿ ಅಥವಾ ಸೂರ್ಯ, 2 ಚಂದ್ರ, 3 ಗುರು, 4 ರಾಹು, 5 ಬುಧ, 6 ಶುಕ್ರ, 7 ಕೇತು, 8 ಶನಿ ಮತ್ತು 9 ಕುಜ ಅಥವಾ ಮಂಗಳ ಗ್ರಹಗಳನ್ನು ಸೂಚಿಸುತ್ತವೆ. 10 ಸಂಖ್ಯೆಯನ್ನು 1+0 = 1 ಎಂದು ಬರೆಯಲಾಗುತ್ತದೆ. 12 ಸಂಖ್ಯೆಯನ್ನು 1+2 = 3 ಎಂದು ಬರೆಯಲಾಗುತ್ತದೆ.

7 ಕೇತುವಿನ ಸಂಖ್ಯೆಯಾಗುತ್ತದೆ. ಯಾವುದೇ ಮನೆಯಲ್ಲಿ ಏಳು ಬಾಗಿಲುಗಳು ಇದ್ದಲ್ಲಿ ಶುಭಫಲಗಳು ಕಡಿಮೆ ಪ್ರಮಾಣದಲ್ಲಿ ದೊರೆಯುತ್ತದೆ. ಯಾವುದೇ ಕೆಲಸ ಕಾರ್ಯಗಳನ್ನು ಆರಂಭಿಸಿದರೂ ಆರಂಭದಲ್ಲಿ ಆಡೆ ತಡೆಗಳು ಎದುರ...