Bengaluru, ಏಪ್ರಿಲ್ 16 -- ಮನೆಗಳಲ್ಲಿ ಇರುವ ಬಾಗಿಲುಗಳು ನಮ್ಮ ಜೀವನದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮವನ್ನು ಬೀರುತ್ತದೆ. ಪರೋಕ್ಷವಾಗಿ ಇದು ಸಂಖ್ಯಾಶಾಸ್ತ್ರವನ್ನು ಆಧರಿಸಿದೆ. ಸಂಖ್ಯಾಶಾಸ್ತ್ರದಲ್ಲಿ ಪ್ರತಿಯೊಂದು ಸಂಖ್ಯೆಯನ್ನೂ ಪ್ರತ್ಯೇಕವಾದ ಗ್ರಹಗಳನ್ನು ಸೂಚಿಸುತ್ತದೆ. ಬಾಗಿಲುಗಳನ್ನು ಮರದಲ್ಲಿ ಮಾಡಲಾಗುತ್ತದೆ. ಆದ್ದರಿಂದ ಇದು ನಕ್ಷತ್ರವನ್ನು ಪ್ರತಿನಿಧಿಸುತ್ತದೆ. ಪ್ರತಿಯೊಂದು ನಕ್ಷತ್ರಗಳಿಗೂ ಪ್ರತ್ಯೇಕವಾದ ಸಸ್ಯ ಸಂಕುಲವಿದೆ.

1 ರವಿ ಅಥವಾ ಸೂರ್ಯ, 2 ಚಂದ್ರ, 3 ಗುರು, 4 ರಾಹು, 5 ಬುಧ, 6 ಶುಕ್ರ, 7 ಕೇತು, 8 ಶನಿ ಮತ್ತು 9 ಕುಜ ಅಥವಾ ಮಂಗಳ ಗ್ರಹಗಳನ್ನು ಸೂಚಿಸುತ್ತವೆ. 10 ಸಂಖ್ಯೆಯನ್ನು 1+0 = 1 ಎಂದು ಬರೆಯಲಾಗುತ್ತದೆ. 12 ಸಂಖ್ಯೆಯನ್ನು 1+2 = 3 ಎಂದು ಬರೆಯಲಾಗುತ್ತದೆ.

ಮನೆಗೆ ಕೇವಲ ಒಂದು ಬಾಗಿಲು ಇದ್ದರೆ ಹೆಚ್ಚಿನ ಪ್ರಮಾಣದಲ್ಲಿ ಶುಭ ಫಲಗಳನ್ನು ಪಡೆಯಬಹುದಾಗಿದೆ. ಕುಟುಂಬದಲ್ಲಿದ್ದ ಕ್ಲಿಷ್ಟಕರ ಪರಿಸ್ಥಿತಿಯು ಸರಳವಾಗಿ ಬಗೆಹರಿಯುತ್ತದೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಆರೋಗ್...