ಭಾರತ, ಮಾರ್ಚ್ 15 -- ವಾರ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರಿಗೆ 2025ರ ಮಾರ್ಚ್ 16 ರಿಂದ 22ರ ವರೆಗಿನ ವಾರ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ.

ಕಲಾವಿದರು ದೇಶವಿದೇಶಗಳಲ್ಲಿ ಹೆಸರು ಗಳಿಸುತ್ತಾರೆ. ಅತಿಯಾದ ಆಹಾರ ಸೇವನೆಯಿಂದ ಅಜೀರ್ಣದ ತೊಂದರೆಯಾಗುತ್ತದೆ. ಮಾತನಾಡುವ ವೇಳೆ ಜಾಗರೂಕತೆಯಿಂದ ವರ್ತಿಸುವಿರಿ. ಕುಟುಂಬದಲ್ಲಿನ ವಿವಾದವನ್ನು ಬಗೆಹರಿಸುವಿರಿ. ನಿಮ್ಮ ಗೌರವಕ್ಕೆ ಸರಿಹೊಂದುವ ಕೆಲಸ ಕಾರ್ಯಗಳನ್ನು ಆಯ್ಕೆ ಮಾಡುವಿರಿ. ಹಣಕಾಸಿನ ವ್ಯವಹಾರದಲ್ಲಿ ವಿಶೇಷ ಬುದ್ಧಿವಂತಿಕೆ ತೋರುವಿರಿ. ಅಪಾಯದ ಸನ್ನಿವೇಶದಲ್ಲಿ ಸಹನೆ ಕಳೆದುಕೊಳ್ಳದೆ ವರ್ತಿಸುವಿರಿ. ಸ್ವಂತ ವ್ಯಾಪ...