Bengaluru, ಜೂನ್ 15 -- ವಾರ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. 2025ರ ಜೂನ್ 8ರ ಭಾನುವಾರದಿಂದ 14ರ ಶನಿವಾರದವರಿಗೆ ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರ ವಾರ ಭವಿಷ್ಯ ಇಲ್ಲಿದೆ.

ನಿಮ್ಮದು ಬಿಡುವಿಲ್ಲದ ದುಡಿಮೆ ಆಗುತ್ತದೆ. ಉದ್ಯೋಗದಲ್ಲಿನ ಜವಾಬ್ದಾರಿಯಿಂದ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಕುಟುಂಬದ ಕೆಲಸ ಕಾರ್ಯಗಳಲ್ಲಿ ಸದಸ್ಯರ ಸಹಾಯ ದೊರೆಯುತ್ತದೆ. ಪರಸ್ಪರ ಒಮ್ಮತದ ಕಾರಣ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ಉದ್ಯೋಗದಲ್ಲಿ ಆಂತರಿಕ ಬದಲಾವಣೆಗಳು ಉಂಟಾಗುತ್ತವೆ. ಕ್ರಮೇಣವಾಗಿ ನಿಮ್ಮ ಪರವಾದ ಫಲಿತಾಂಶಗಳು ದೊರೆಯುತ್ತವೆ. ಉದ್ಯೋಗದಲ್ಲಿ ಉನ್ನತ ಅಧಿಕಾರ ದೊರೆವ ಸಾಧ್ಯತೆಗಳಿವೆ. ವಿದ...