ಭಾರತ, ಫೆಬ್ರವರಿ 3 -- ಭಾರತದ ಐಟಿ ವಲಯದ ದೈತ್ಯ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ಅವರು, ಕಳೆದ ರಾತ್ರಿ (ಫೆಬ್ರುವರಿ 2ರ ಭಾನುವಾರ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ 5ನೇ ಟಿ20 ಪಂದ್ಯವನ್ನು ವೀಕ್ಷಿಸಿದರು. ಇವರೊಂದಿಗೆ ಸಿನಿಮಾ ಹಾಗೂ ಉದ್ಯಮ ವಲಯದ ಸೆಲೆಬ್ರಿಟಿಗಳು ಕೂಡಾ ಸ್ಟೇಡಿಯಂನಲ್ಲಿ ಕಾಣಿಸಿಕೊಂಡರು. ಇವೆಲ್ಲದರ ನಡುವೆ ನಾರಾಯಣ ಮೂರ್ತಿಯವರು ಪಂದ್ಯ ವೀಕ್ಷಿಸುತ್ತಿರುವುದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವಾಂಖೆಡೆ ಸ್ಟೇಡಿಯಂನ ಸ್ಟ್ಯಾಂಡ್‌ನಲ್ಲಿ ಕುಳಿತು ಮೂರ್ತಿ ಅವರು ಪಂದ್ಯ ವೀಕ್ಷಿಸುವ ಪೋಸ್ಟ್, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಪಂದ್ಯವನ್ನು ರಾಜೀವ್ ಶುಕ್ಲಾ, ಮುಖೇಶ್ ಅಂಬಾನಿ ಮತ್ತು ಆಕಾಶ್ ಅಂಬಾನಿಯಂತಹ ಉದ್ಯಮ ಮತ್ತು ರಾಜಕೀಯ ವಲಯದ ವ್ಯಕ್ತಿಗಳು ವೀಕ್ಷಿಸಿದರು. ಇದೇ ವೇಳೆ ಬ್ರಿಟನ್‌ನ ಮಾಜಿ ಪ್ರಧಾನಿ ರಿಷಿ ಸುನಕ್‌, ಉದ್ಯಮಿ ಮನೋಜ್ ಬಾದಲೆ ಜೊತೆಗಿದ್ದರು.

ಇವೆಲ್ಲದರ ನಡ...