ಭಾರತ, ಏಪ್ರಿಲ್ 10 -- ನಟ ಧನ್ವೀರ್ ಅಭಿನಯದ ಬಹುನಿರೀಕ್ಷಿತ ವಾಮನ ಸಿನಿಮಾ ಇಂದು (ಏಪ್ರಿಲ್ 10) ಬಿಡುಗಡೆಯಾಗಿದೆ. ಈ ಸಿನಿಮಾ ನೋಡುವ ಸಲುವಾಗಿ ನಟ ದರ್ಶನ ನಿನ್ನೆ (ಏಪ್ರಿಲ್ 9) ರಾತ್ರಿ ಜಿಟಿ ಮಾಲ್‌ಗೆ ಬಂದಿದ್ದರು. ಸಿನಿಮಾ ನೋಡಿದ ಬಳಿಕ ಅವರು ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಜೈಲಿನಿಂದ ಹೊರ ಬಂದ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ ನಟ ದರ್ಶನ್‌.

ಸ್ನೇಹಿತ ಧನ್ವೀರ್ ನಟನೆಯ ವಾಮನ ಚಿತ್ರವನ್ನು ನೋಡಿ ಹೊರ ಬಂದ ನಂತರ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಮೊದಲಾರ್ಧಗಿಂತ ದ್ವಿತಿಯಾರ್ಧ ಹೆಚ್ಚು ಇಂಟರೆಸ್ಟಿಂಗ್ ಆಗಿದೆ ಎಂದಿದ್ದಾರೆ ದರ್ಶನ್‌. ಸಿನಿಮಾ ಬಗ್ಗೆ ಸಾಕಷ್ಟು ಪಾಸಿಟಿವ್ ಮಾತುಗಳನ್ನು ಹೇಳಿರುವ ದರ್ಶನ್‌ ವಾಮನ 'ಸಿನಿಮಾ ತುಂಬಾ ಚೆನ್ನಾಗಿದೆ. ಟ್ರೈಲರ್ ನೋಡಿ ಇದು ಮಾಸ್ ಸಿನಿಮಾ ಅಂದುಕೊಂಡಿರುತ್ತಾರೆ. ಆದರೆ ಇದು ಮದರ್ ಸೆಂಟಿಮೆಂಟ್ ಇರುವ ಚಿತ್ರ. ನನಗೆ ಚಿತ್ರ ತುಂಬಾ ಇಷ್ಟ ಆಯ್ತು. ಚಿತ್ರದಲ್ಲಿ ಒಳ್ಳೊಳ್ಳೆ ಹಾಡುಗಳಿವೆ. ಧನ್ವೀರ್ ಸಾಕಷ್ಟು ಪಳಗಿದ್ದಾರೆ. ಒಟ್ಟಾರೆ ಈ ಚಿ...