ಭಾರತ, ಏಪ್ರಿಲ್ 11 -- Vamana Movie Review: ಇನ್ನು ಬಿಡುಗಡೆಯೇ ಆಗುವುದಿಲ್ಲ ಎನ್ನುವಂತಿದ್ದ 'ವಾಮನ' ಸಿನಿಮಾ ಕೊನೆಗೂ ಬಿಡುಗಡೆಯಾಗಿದೆ. ಟ್ರೇಲರ್‍ ನೋಡುವುದಾದರೆ ಇದೊಂದು ಪಕ್ಕಾ ಆ್ಯಕ್ಷನ್‍ ಚಿತ್ರದ ಜೊತೆಗೆ ತಾಯಿ ಸೆಂಟಿಮೆಂಟ್‍ನ ಚಿತ್ರ ಎಂದೆನಿಸುತ್ತದೆ. ಇಷ್ಟಕ್ಕೂ 'ವಾಮನ' ಚಿತ್ರದ ಕಥೆ ಏನು? ಚಿತ್ರ ಹೇಗಿದೆ? ಎಂದು ನೀವೇ ಓದಿ .

ಪಾಪಣ್ಣ (ಸಂಪತ್‍ ರಾಜ್‍) ಎಂಬ ಗ್ಯಾಂಗ್‍ಸ್ಟರ್‌ನ ಕಡೆಯ ಇಬ್ಬರು ಪ್ರಮುಖರನ್ನು ವಾಮನ (ಧನ್ವೀರ್ ಗೌಡ) ಎಂಬ ಮೆಕ್ಯಾನಿಕ್‍ ಕೊಲೆ ಮಾಡುತ್ತಾನೆ. ಅಷ್ಟೇ ಅಲ್ಲ, ಪಾಪಣ್ಣನನ್ನೂ ಮುಗಿಸುವುದಕ್ಕೆ ಸ್ಕೆಚ್‍ ಹಾಕುತ್ತಾನೆ. ವೃತ್ತಿಯಲ್ಲಿ ಮೆಕ್ಯಾನಿಕ್‍ ಆಗಿರುವ ವಾಮನನಿಗೂ, ಪಾಪಣ್ಣನಿಗೂ ಇರುವ ದ್ವೇಷವೇನು? ಯಾಕೆ ವಾಮನ ಪಾಪಣ್ಣನ ಹಿಂದೆ ಬಿದ್ದಿರುತ್ತಾನೆ? ಈ ಹೋರಾಟದಲ್ಲಿ ಏನೆಲ್ಲಾ ಆಗುತ್ತದೆ ಎಂಬುದೇ 'ವಾಮನ' ಚಿತ್ರದ ಕಥೆ.

'ವಾಮನ' ಯಾರು? ಯಾಕೆ ಪಾಪಣ್ಣನ ವಿರುದ್ಧ ಹೋರಾಟ ಮಾಡುತ್ತಿರುತ್ತಾನೆ? ಎನ್ನುವುದು ಗೊತ್ತಾಗಬೇಕಿದ್ದರೆ ಕೊನೆಯ ಅರ್ಧ ಗಂಟೆ ಕಾಯಬೇಕು. ಅದಕ್ಕೂ ಮುನ್ನು ಒಂದಿಷ್...