ಭಾರತ, ಏಪ್ರಿಲ್ 21 -- ಜಾಗತಿಕ ವಾಣಿಜ್ಯ ವಹಿವಾಟಿನ ಪಾರಮ್ಯ ಮುಂದುವರಿಸುವುದಕ್ಕೆ ಅಮೆರಿಕ ಪ್ರಯತ್ನಿಸುತ್ತಲೇ ಇದ್ದು, ಚೀನಾ ಮತ್ತು ಭಾರತಗಳು ಅದಕ್ಕೆ ಬೆದರಿಕೆಯಾಗಿ ಕಂಡುಬಂದಿವೆ. ವಾಣಿಜ್ಯ ಜಗತ್ತಿನ ಪಾರಮ್ಯ ಮುಂದುವರಿಸುವುದಕ್ಕಾಗಿ ಅಮೆರಿಕ ನಿರ್ಬಂಧಗಳನ್ನು ಹೇರುವುದನ್ನು ಮುಂದುವರಿಸುತ್ತ ಬಂದಿದೆ. ಈ ನಡುವೆ ಅಮೆರಿಕದ ನಿರ್ಬಂಧ ಬೆದರಿಕೆಗೆ ಚೀನಾ ಪ್ರತಿಕ್ರಿಯಿಸಿದ್ದು, ಪೊಳ್ಳು ಬೆದರಿಕೆ ನಿಲ್ಲಿಸುವಂತೆ ಚೀನಾ ಹೇಳಿದೆ. ಈ ವಿದ್ಯಮಾನದ ಮೇಲೆ ಲೇಖಕ ರಂಗಸ್ವಾಮಿ ಮೂಕನಹಳ್ಳಿ ಬೆಳಕು ಚೆಲ್ಲಿದ್ದು, ಆ ವಿವರ ಇಲ್ಲಿದೆ.

ಬ್ರಿಟಿಷ್ ಮತ್ತು ಅಮೇರಿಕಾ ದೇಶದ ಬಿಳಿಯರು ನಮಗಿಂತ ಬಲಿಷ್ಠರು , ಉತ್ತಮರು ಯಾರೂ ಇಲ್ಲ ಎನ್ನುವ ದುರಹಂಕಾರ ಇತಿಹಾಸದ ಉದ್ದಕ್ಕೂ ಕಂಡುಬರುತ್ತದೆ . ಅಮೇರಿಕಾ ದೇಶದ ಡಬಲ್ ಸ್ಟ್ಯಾಂಡರ್ಡ್ ನೀತಿಗಳು ಇದಕ್ಕೊಂದು ದೊಡ್ಡ ಉದಾಹರಣೆ. ಜಗತ್ತಿನ ಎಲ್ಲಾ ದೇಶಗಳೂ ಅವರು ಹೇಳಿದಂತೆ ಕೇಳಬೇಕು. ಸ್ವಲ್ಪ ಹೆಚ್ಚು ಕಡಿಮೆಯಾದರೆ ಸಾಕು ಸ್ಯಾಂಕ್ಷನ್ ಎನ್ನುವ ಭೂತಪ್ಪನನ್ನು ಚೂ ಬಿಡುವುದು ಸಾಮಾನ್ಯವಾಗಿತ್ತು. ಭಾರತವನ್ನ...