Bengaluru, ಏಪ್ರಿಲ್ 21 -- ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ವಾಟ್ಸ್‌ಆ್ಯಪ್‌ ಶೀಘ್ರದಲ್ಲೇ ಹೊಸ ಫೀಚರ್ ಒಂದನ್ನು ಒದಗಿಸುತ್ತಿದೆ. ಅದರ ಮೂಲಕ ನಿಮ್ಮ ವಾಟ್ಸ್‌ಆ್ಯಪ್‌ನಲ್ಲಿ ಬರುವ ಮೆಸೇಜ್‌ಗಳನ್ನು ನೀವು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಭಾಷಾಂತರಿಸಬಹುದಾಗಿದೆ. ಪ್ರಸ್ತುತ ಈ ಆಯ್ಕೆ ಬೀಟಾ ಟೆಸ್ಟಿಂಗ್‌ನಲ್ಲಿದೆ ಎಂದು ವಾಬೀಟಾ ಇನ್ಫೋ ವರದಿ ಮಾಡಿದೆ. ಈ ಆಯ್ಕೆ ಬಳಕೆದಾರರ ಫೋನ್‌ ಮೂಲಕವೇ ದೊರೆಯಲಿದೆ, ಅದಕ್ಕಾಗಿ ಅವರು ಲಭ್ಯವಿರುವ ಭಾಷೆಯ ಪ್ಯಾಕ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಿದೆ.

ವಾಟ್ಸ್‌ಆ್ಯಪ್‌ ಬಳಕೆದಾರರಿಗೆ ಎಂಡ್ ಟು ಎಂಡ್ ಎನ್‌ಕ್ರಿಪ್ಷನ್ ಆಯ್ಕೆ ನೀಡುತ್ತದೆ. ಅದರ ಮೂಲಕ ಸಂದೇಶಗಳ ಗೌಪ್ಯತೆಯನ್ನು ಕಾಪಾಡಿಕೊಳ್ಳಲಿದೆ. ಆದರೆ ಮೆಸೇಜ್ ಭಾಷಾಂತರಕ್ಕೆ ಅದು ಮೆಟಾ ಸರ್ವರ್ ಬಳಕೆ ಮಾಡುವುದಿಲ್ಲ, ಬದಲಾಗಿ ಬಳಕೆದಾರರೇ ಭಾಷಾ ಪ್ಯಾಕ್ ಡೌನ್‌ಲೋಡ್ ಮಾಡಿಕೊಂಡು, ಫೋನ್‌ನಲ್ಲಿ ಆಫ್‌ಲೈನ್‌ನಲ್ಲಿಯೇ ಮೆಸೇಜ್ ಟ್ರಾನ್ಸ್‌ಲೇಶನ್ ಫೀಚರ್ ಬಳಸಬಹುದು ಎಂದು ಕಂಪನಿ ಹೇಳಿದೆ.

ಪ್ರಸ್ತುತ ಈ ಆಯ್ಕೆ ಬೀಟಾ ಟೆಸ್ಟ...