ಭಾರತ, ಫೆಬ್ರವರಿ 26 -- CBSE Board Exams: ಮುಂದಿನ ಶೈಕ್ಷಣಿಕ ವರ್ಷದಿಂದ (2026) ಅನ್ವಯವಾಗುವಂತೆ ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆಗಳನ್ನು ನಡೆಸುವುದಕ್ಕೆ ಸಂಬಂಧಿಸಿ ಶೀಘ್ರವೇ ಕರಡು ಸಮಾಲೋಚನಾ ಪತ್ರವನ್ನು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಮಂಗಳವಾರ ಬಿಡುಗಡೆ ಮಾಡಿದೆ. ಇದರಂತೆ, 2026ರ ಫೆಬ್ರವರಿಯಲ್ಲಿ ಒಂದು, 2026ರ ಮೇ ತಿಂಗಳಲ್ಲಿ ಇನ್ನೊಂದು ಹೀಗೆ ಎರಡು ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿಗಳು ಇಚ್ಛಿಸುವುದಾದರೆ ಎರಡೂ ಪರೀಕ್ಷೆಗಳನ್ನು ಬರೆಯಬಹುದು. ಇದಲ್ಲದೆ, ಮೊದಲ ಪರೀಕ್ಷೆಯಲ್ಲಿ ಯಾವುದಾದರೂ ವಿಷಯದಲ್ಲಿ ಕಡಿಮೆ ಅಂಕ ಬಂದರೆ ಆ ವಿಷಯವನ್ನು ಎರಡನೇ ಪರೀಕ್ಷೆಯಲ್ಲಿ ಬರೆದು ಅಂಕ ಸುಧಾರಣೆ ಮಾಡಿಕೊಳ್ಳಬಹುದಾಗಿದೆ.

ಸಿಬಿಎಸ್‌ಇ ಮಂಡಳಿ ಅನುಮೋದಿಸಿದ ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆ ವ್ಯವಸ್ಥೆ ಕುರಿತ ಸಮಾಲೋಚನಾ ಪತ್ರವನ್ನು ಸಾರ್ವಜನಿಕರಿಗೂ ಸಿಗುವಂತೆ ಪ್ರಕಟಿಸಿದೆ. ಸಾರ್ವಜನಿಕರು ಮತ್ತು ಪಾಲುದಾರರು ಮಾರ್ಚ್ 9ರ ತನಕ ಇದಕ್ಕೆ ಸಂಬಂಧಿಸಿದ ಹಿಮ್ಮಾಹಿತಿ, ಶಿಫಾರಸು, ...