ಭಾರತ, ಮೇ 17 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮೇ 16ರ ಸಂಚಿಕೆಯಲ್ಲಿ ಶ್ರಾವಣಿ ಮೇಲೆ ದ್ವೇಷದಿಂದ ಬುಸುಗುಟ್ಟುತ್ತಿರುವ ಶ್ರೀವಲ್ಲಿ ಕಾಂತಮ್ಮನನ್ನು ಭೇಟಿ ಮಾಡುವ ಸಲುವಾಗಿ ಸುಬ್ಬು ಮನೆಗೆ ಬರುತ್ತಾಳೆ. ಅಲ್ಲಿ ಅವಳಿಗೆ ಕಾಂತಮ್ಮ ಬಟ್ಟೆ ಒಗೆಯುತ್ತಿರುವುದು ಕಾಣಿಸುತ್ತದೆ. ʼಕಾಂತಮ್ಮಮ್ಮಿ, ನೀವೇನು ಬಟ್ಟೆ ವಾಶ್‌ ಮಾಡ್ತಾ ಇದೀರಾ, ಈ ಮನೆಯಲ್ಲಿ ಕೆಲಸ ಮಾಡಲು ಆ ಶ್ರಾವಣಿ ಇಲ್ವಾ, ನೀವ್ಯಾಕೆ ಕೆಲಸ ಮಾಡಬೇಕುʼ ಎನ್ನುತ್ತಾಳೆ. ಅಲ್ಲದೇ ನೀವು ಶ್ರಾವಣಿ ವಿರುದ್ಧ ಸೇಡು ತೀರಿಸಿಕೊಳ್ಳಲು ನನಗೆ ಸಹಾಯ ಮಾಡ್ತೀನಿ ಅಂತ ಹೇಳಿದ್ರಿ, ಅಲ್ಲದೇ ಸುಬ್ಬು ಜೊತೆ ಮದುವೆ ಮಾಡಿಸ್ತೀನಿ ಅಂತ ಹೇಳಿದ್ರಿ, ಆದರೆ ಈಗ ಎಲ್ಲಾ ಮರೆತು ಬಟ್ಟೆ ಒಗೆಯುತ್ತಾ ಕೂತಿದ್ದೀರಾ ಎಂದು ರೋಷದಲ್ಲಿ ಕೇಳುತ್ತಾಳೆ. ಆಗ ಕಾಂತಮ್ಮ ಸುಬ್ಬು ನಿನಗೆ ಯಾಕೆ ಸಿಗಬೇಕು, ಸುಬ್ಬುಗೆ ಶ್ರಾವಣಿ ಮೇಡಂ ಹೆಂಡತಿಯಾಗಿ ಆಗಿದೆ. ಈಗ ನೀನು ಸುಬ್ಬುವನ್ನು ಇಷ್ಟಪಟ್ಟರೆ ಮದುವೆಯಾಗುತ್ತೇನೆ ಎಂದರೆ ಪ್ರಯೋಜನವಿಲ್ಲ. ನೀನು ಸುಬ್ಬು ಆಸೆ ಬಿಡುʼ ಎಂದು ಉಲ್ಟಾ ಹೊಡೆಯುತ್ತಾಳೆ. ಕಾಂತ...