Bengaluru, ಏಪ್ರಿಲ್ 20 -- ಹಿಂದೂ ಧರ್ಮದಲ್ಲಿನ ಕೆಲವು ಆಚರಣೆಯಗಳಿಗೆ ಅಧ್ಯಾತ್ಮಿಕವಾಗಿ ತುಂಬಾ ಮಹತ್ವವನ್ನು ಪಡೆದಿರುತ್ತವೆ. ದೈವಿಕ ಅನುಗ್ರಹ, ಸುಖ, ಶಾಂತಿ, ಸಮೃದ್ಧಿ ಹಾಗೂ ಪಾಪಗಳಿಂದ ಮುಕ್ತಿಯನ್ನು ಬಯಸಿ ಬಯಸಿ ಅನೇಕ ವ್ರತಗಳನ್ನು ಆಚರಿಸಲಾಗುತ್ತದೆ. ಇದರಲ್ಲಿ ವರುಥಿನಿ ಏಕಾದಶಿ ಕೂಡ ಒಂದಾಗಿದೆ. ಧೃಕ್ ಪಂಚಾಂಗದ ಪ್ರಕಾರ ವರುಥಿನಿ ಏಕಾದಶಿಯನ್ನು ಚೈತ್ರಮಾಸದ ಕೃಷ್ಣಪಕ್ಷದಲ್ಲಿ ಆಚರಿಸಲಾಗುತ್ತಿದೆ. ಪ್ರತಿ ವರ್ಷ ವರುಥಿನಿ ಏಕಾದಶಿಯನ್ನು ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಬರುತ್ತದೆ. ಈ ವರ್ಷ, ವರುಥಿನಿ ಏಕಾದಶಿಯನ್ನು 2025 ರ ಏಪ್ರಿಲ್ 24 ರ ಗುರುವಾರ ಆಚರಿಸಲಾಗುತ್ತದೆ. ಈ ವರ್ಷ ವರುಧಿನಿ ಏಕಾದಶಿಯಂದು, ಬ್ರಹ್ಮ ಮತ್ತು ಇಂದ್ರ ಯೋಗಗಳ ಪವಿತ್ರ ಸಂಗಮ ರೂಪುಗೊಳ್ಳುತ್ತದೆ. ಈ ಎರಡು ಯೋಗಗಳನ್ನು ಜ್ಯೋತಿಷ್ಯದಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ.

ಉಪವಾಸವನ್ನು ವಿಷ್ಣುವಿಗೆ ಅರ್ಪಿಸಲಾಗಿದೆ. ವರುಥಿನಿ ಏಕಾದಶಿ ದಿನದಂದು, ಭಕ್ತರು ವಿಷ್ಣುವನ್ನು ಪೂಜಿಸುತ್ತಾರೆ. ಹೆಚ್ಚಿನ ಆಶೀರ್ವಾದ ಪಡೆಯಲು ಉಪವಾಸವನ್ನು ಆಚರಿ...