ಭಾರತ, ಫೆಬ್ರವರಿ 19 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 18ರ ಸಂಚಿಕೆಯಲ್ಲಿ ಶರತ್‌ ಆಸೆಯಂತೆ ಸುಬ್ಬುವನ್ನು ಅವನ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುವಂತೆ ಹೇಳುತ್ತಾರೆ ಮಿನಿಸ್ಟರ್ ವೀರೇಂದ್ರ. ಯಜಮಾನರು ಕರೆದ ಖುಷಿಗೆ ಒಳಗೆ ಓಡಿ ಹೋಗುವ ಸುಬ್ಬು ಖುಷಿಯಿಂದಲೇ ಈ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡಲು ಒಪ್ಪಿಕೊಳ್ಳುತ್ತಾನೆ. ಶರತ್ ಹೋದ ಮೇಲೆ ಯಜಮಾನ್ರೇ ಎಂದು ಕರೆಯುವ ಸುಬ್ಬುಗೆ ಪ್ರತಿಕ್ರಿಯೆ ನೀಡಿದೇ ಹೋಗಿ ಬಾಗಿಲು ಹಾಕಿಕೊಳ್ಳುತ್ತಾರೆ ಮಿನಿಸ್ಟರ್ ವೀರೇಂದ್ರ.

ಯಜಮಾನರ ಕೋಪ ಇನ್ನೂ ಕರಗಿಲ್ಲ ಎಂಬ ಬೇಸರದಲ್ಲಿ ಗೇಟ್ ಬಳಿಗೆ ಹೋಗುತ್ತಿದ್ದ ಸುಬ್ಬುಗೆ ಮನೆಯ ಒಳಗಿನಿಂದ ಕೆಲಸದಾಕೆ ಯಜಮಾನ್ರೆ, ಯಜಮಾನ್ರೆ ಎಂದು ಕೂಗುತ್ತಿರುವುದು ಕೇಳಿಸುತ್ತದೆ. ಒಮ್ಮೆಲೆ ಗಾಬರಿಯಾಗುವ ಸುಬ್ಬು ಮನೆಯೊಳಗೆ ಹೋಗಲು ನೋಡುತ್ತಾನೆ. ಆದರೆ ಒಳಗಡೆಯಿಂದ ಲಾಕ್ ಆಗಿರುತ್ತದೆ. ಕಿಟಕಿಯಲ್ಲಿ ಹೋಗಿ ನೋಡಿದಾಗ ಮಿನಿಸ್ಟರ್ ವೀರೇಂದ್ರ ಪ್ರಜ್ಞೆ ತಪ್ಪಿ ಬಿದ್ದಿರುತ್ತಾರೆ. ಕೆಲಸದಾಕೆಯ ಬಳಿ ಬಾಗಿಲು ತೆಗೆಯಲು ಹೇಳುವ ಸುಬ್ಬು ಯಜಮಾನರ ಬಳಿಗೆ ಓಡಿ ಮು...