ಭಾರತ, ಏಪ್ರಿಲ್ 24 -- ಡಾ. ರಾಜ್‌ಕುಮಾರ್‌ ಮೊದಲ ಹೆಸರು ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್. 'ಬೇಡರ ಕಣ್ಣಪ್ಪ' ಚಿತ್ರ ಮಾಡುವುದಕ್ಕೆ ಸಿದ್ಧತೆ ನಡೆಯುತ್ತಿತ್ತು. ಒಮ್ಮೆ ನಿರ್ದೇಶಕ ಎಚ್‍.ಎಲ್‍.ಎನ್‍. ಸಿಂಹ ಅವರು ಮದರಾಸಿನಿಂದ ತಮ್ಮ ಸ್ವಂತ ಊರಾದ ನಂಜನಗೂಡಿಗೆ ಹೋಗಿದ್ದರಂತೆ. ಅಲ್ಲಿ ಮುತ್ತುರಾಜುವನ್ನು ನೋಡುತ್ತಿದ್ದಂತೆಯೇ, ಕಣ್ಣಪ್ಪನ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾರೆ ಎಂದನಿಸಿತಂತೆ.ಚಿತ್ರಕ್ಕೆ ಹೊಂದುವಂತೆ ಹೆಸರು ಬದಲಾಯಿಸಿಕೊಳ್ಳಬೇಕು ಎಂದು ಮೇಯಪ್ಪ ಚೆಟ್ಟಿಯಾರರು ಹೇಳಿದರಂತೆ. ಆದರೆ, ಮುತ್ತುರಾಜುಗೆ ತಮ್ಮ ತಂದೆ-ತಾಯಿ ಇಟ್ಟ ಹೆಸರು ಬದಲಾಯಿಸಿಕೊಳ್ಳುವುದಕ್ಕೆ ಇಷ್ಟವಿರಲಿಲ್ಲವಂತೆ. ಕೊನೆಗೆ ಹಿರಿಯರ ಒತ್ತಾಯದ ಮೇಲೆ ಹೆಸರು ಬದಲಿಸಿಕೊಳ್ಳುವುದಕ್ಕೆ ಒಪ್ಪಿದ್ದಾರೆ.

1983ರಲ್ಲಿ ಅವರಿಗೆ ಪದ್ಮಭೂಷಣ ಮತ್ತು 1995 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ಏಕೈಕ ನಾಯಕ ನಟ ಇವರಾಗಿದ್ದಾರೆ.

ಜೇಮ್ಸ್ ಬಾಂಡ್ ಆಧಾರಿತ ಪಾತ...