ಭಾರತ, ಫೆಬ್ರವರಿ 12 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 11ರ ಸಂಚಿಕೆಯಲ್ಲಿ ಮನೆಯವರೆಲ್ಲರೂ ಕೂತು ಊಟ ಮಾಡುವಾಗ ಶ್ರಾವಣಿಯನ್ನೂ ಕರೆ ತರುತ್ತಾರೆ ಪದ್ಮನಾಭ. ತಾನೇ ಊಟ ಬಡಿಸುತ್ತೇನೆ ಎಂದು ಶ್ರಾವಣಿ ಹೇಳಿದ್ದೇ ತಡ ಕೋಪದಿಂದ ತಟ್ಟೆಯನ್ನು ನೆಲಕ್ಕೆ ಕುಕ್ಕಿ, ಮಗಳನ್ನು ಕರೆದುಕೊಂಡು ಎದ್ದು ಹೋಗುತ್ತಾಳೆ ವಿಶಾಲಾಕ್ಷಿ. ಧನಲಕ್ಷ್ಮೀ ಕೂಡ ಕೋಪದಿಂದ ಆ ಜಾಗದಿಂದ ಎದ್ದು ಹೋಗುತ್ತಾಳೆ. ಸುಬ್ಬು ಕೂಡ ಹೋಗಲು ನೋಡಿದಾಗ ಪದ್ಮನಾಭ ಮಗನ ಬಳಿ ತನ್ನ ಮಾತಿಗೆ ಬೆಲೆ ಕೊಟ್ಟು ಕೂತು ಊಟ ಮಾಡುವಂತೆ ಹೇಳುತ್ತಾರೆ. ಆದರೆ ಶ್ರಾವಣಿ ಬಡಿಸಿದ್ದು ಎಂಬ ಕೋಪಕ್ಕೆ ಸುಬ್ಬು ಕೋಪದಿಂದ ಗಡಿಬಿಡಿಯಲ್ಲಿ ತುತ್ತು ನುಂಗುತ್ತಾನೆ, ಇದರಿಂದ ಗಂಟಲಿಗೆ ಸಿಕ್ಕಿ ಕೆಮ್ಮಲು ಶುರು ಮಾಡುತ್ತಾನೆ. ಆಗ ಶ್ರಾವಣಿ ತಾನೇ ತಿನ್ನಿಸುವುದಾಗಿ ಹೇಳಿದ್ದೇ ತಡ ತನ್ನ ಪಾಡಿಗೆ ತನ್ನನ್ನು ಇರಲು ಬಿಡಿ ಎಂದು ಕೈ ಮುಗಿದು ಹೇಳಿ ಕೋಪದಿಂದ ಎದ್ದು ಹೋಗುತ್ತಾನೆ. ಇದರಿಂದ ಕುಸಿದು ಹೋಗುತ್ತಾಳೆ ಶ್ರಾವಣಿ. ಅಳುತ್ತಾ ಕೂತ ಶ್ರಾವಣಿಗೆ ಪದ್ಮನಾಭ ಧೈರ್ಯ ತುಂಬುತ್ತಾರೆ.

ಶ...