ಭಾರತ, ಮಾರ್ಚ್ 5 -- ‍ಪ್ರೀತಿ ವಿಷಯಕ್ಕೆ ಬಂದರೆ ಜನರು ಸಾಮಾನ್ಯವಾಗಿ ವಯಸ್ಸಿನ ವಿಚಾರವನ್ನು ನಿರ್ಲಕ್ಷಿಸುತ್ತಾರೆ. ಯಾಕೆಂದರೆ ಪ್ರೀತಿಗೆ ಯಾವುದೇ ಮಿತಿಗಳಿಲ್ಲ ಎಂಬುದು ಅವರ ಭಾವನೆ. ಪ್ರೀತಿಯಲ್ಲಿ ವಯಸ್ಸು ಮುಖ್ಯವಲ್ಲ ಎಂದರೂ ಮದುವೆ ವಿಚಾರಕ್ಕೆ ಬಂದಾಗ ಇದು ಬಹಳ ಮುಖ್ಯ ವಿಷಯ ಎನ್ನಿಸುತ್ತದೆ. ಅದಕ್ಕೆ ಕಾರಣ ಸಮಾಜದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದ ಕಟ್ಟುಪಾಡುಗಳು. ಮೊದಲಿನಿಂದಲೂ ಗಂಡ-ಹೆಂಡತಿಯ ನಡುವೆ ನಿರ್ದಿಷ್ಟ ವಯಸ್ಸಿನ ಅಂತರ ಇರಬೇಕು ಎಂಬ ನಿಯಮಗಳಿತ್ತು.

ಭಾರತದ ಹಲವು ಸಂಪ್ರದಾಯಗಳಲ್ಲಿ ಹೆಂಡತಿಗಿಂತ ಗಂಡ ದೊಡ್ಡವನಾಗಿರಬೇಕು ಎಂಬುದನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಹಾಗಾದರೆ ನಿಜಕ್ಕೂ ಗಂಡನಿಗಿಂತ ಹೆಂಡತಿ ಚಿಕ್ಕವಳಾಗಿ ಇರಬೇಕಾ, ಇದು ನಿಜಕ್ಕೂ ಅಗತ್ಯವೇ ಅಥವಾ ಕೇವಲ ಹಳೆಯ ಮನಸ್ಥಿತಿಯೇ, ಈ ಬಗ್ಗೆ ವಿಜ್ಞಾನ ಹಾಗೂ ಸಮಾಜ ಹೇಳುವುದೇನು ಎಂಬ ವಿವರ ಇಲ್ಲಿದೆ.

ಭಾರತದಲ್ಲಿ ಪತಿ ಮತ್ತು ಪತ್ನಿಯ ನಡುವಿನ ವಯಸ್ಸಿನ ಅಂತರವು ಸಾಮಾನ್ಯವಾಗಿ ಮದುವೆಗೆ ಸೂಕ್ತವೆಂದು ಪರಿಗಣಿಸಲಾಗುತ್ತದೆ. ನಮ್ಮ ಸಂಪ್ರದಾಯ ಪತಿ...