Bandipur, ಏಪ್ರಿಲ್ 6 -- ಕಾಡನ್ನು ಉಳಿಸಿ ಪ್ರಾಣಿ ರಕ್ಷಿಸಿ ಎನ್ನುವ ಘೋಷಣೆಯೊಂದಿಗೆ ನಮ್ಮ ನಡೆ ಬಂಡೀಪುರ ಕಡೆಗೆ ಭಾನುವಾರ ನಡೆಯಿತು. ನಾನಾ ಭಾಗಗಳವರು, ಸ್ಥಳೀಯರು ಬಂಡೀಪುರದಲ್ಲಿ ಪಾದಯಾತ್ರೆ ನಡೆಸಿದರು.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಕಗ್ಗಳದಹುಂಡಿ ಗ್ರಾಮದಿಂದ ಮದ್ದೂರು ಚೆಕ್ ಪೋಸ್ಟ್ ವರಗೆ ಸಾಗಿದ ಪಾದಯಾತ್ರೆ ವೇಳೆ ಹಲವರು ಭಾಗಿಯಾಗಿ ಮಾತನಾಡಿದರು.

ಬಂಡೀಪುರದಲ್ಲಿ ನಡೆದ ಧರಣಿ ವೇಳೆ ಮಹಿಳೆಯರು, ಮಕ್ಕಳು ಕೂಡ ಭಾಗಿಯಾಗಿ ವನ್ಯಜೀವಿಗಳಿಗೆ ದನಿಯಾದರು.

ವಿವಿಧ ಭಾಗಗಳಿಂದ ಬಂದಿದ್ದ ಪರಿಸರ ಪ್ರಿಯರು ತಮ್ಮ ಮಕ್ಕಳನ್ನೂ ಕರೆ ತಂದರು. ಮಕ್ಕಳು ಹಿಡಿದಿದ್ದ ಸೇವ್‌ ಬಂಡೀಪುರ ಫಾರೆಸ್ಟ್‌ ಎನ್ನುವ ಪೋಸ್ಟರ್‌ಗಳಿ ಗಮನ ಸೆಳೆದವು.

ಆರು ತಿಂಗಳಿನಿಂದಲೂ ಬಂಡೀಪುರದ ರಾತ್ರಿ ವಾಹನ ಸಂಚಾರ ನಿಷೇಧ ತೆರವುಗೊಳಿಸುವ ಪ್ರಯತ್ನಗಳು ನಡೆದಿದ್ದು., ಇದನ್ನು ಬಂಡೀಪುರದಲ್ಲಿ ಧರಣಿ ನಡೆಸಿದವರು ಬಲವಾಗಿ ವಿರೋಧಿಸಿದರು.

ಬಂಡೀಪುರದೆಡೆಗೆ ನಮ್ಮ ನಡಿಗೆ ಎನ್ನುವ ಬ್ಯಾನರ್‌ ಅಡಿಯಲ್ಲಿ ನಡೆದ ಪಾದಯಾತ್ರೆ ಬಳಿಕ ಧರಣಿಯನ್ನೂ ನ...