नई दिल्ली, ಏಪ್ರಿಲ್ 27 -- ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಭಿಷೇಕ್ ನಾಯರ್ ಅವರನ್ನು ಟೀಮ್ ಇಂಡಿಯಾದ ಸಹಾಯಕ ಕೋಚ್ ಹುದ್ದೆಯಿಂದ ತೆಗೆದುಹಾಕಿದೆ. ಇದೀಗ ಅವರ ಸ್ಥಾನಕ್ಕೆ ಬದಲಿ ಆಟಗಾರನ ಹುಡುಕಾಟ ನಡೆಸುತ್ತಿದ್ಯಾ ಅಥವಾ ಹುಡುಕಾಟ ನಡೆಸುತ್ತಿಲ್ಲವೇ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಬೌಲಿಂಗ್ ಕೋಚ್ ಆಗಿ ಮಾರ್ನೆ ಮಾರ್ಕೆಲ್, ಫೀಲ್ಡಿಂಗ್ ಕೋಚ್ ಆಗಿ ರಯಾನ್ ಟೆನ್ ಡೊಸ್ಚಾಟ್ ಮತ್ತು ಬ್ಯಾಟಿಂಗ್ ಕೋಚ್ ಆಗಿ ಸಿತಾಂಶು ಕೊಟಾಲ್ ನೇಮಕಗೊಂಡಿರುವ ಕಾರಣ ಗೌತಮ್ ಗಂಭೀರ್​​ಗೆ ಇನ್ನೂ ಸಹಾಯಕ ಕೋಚ್ ಅಗತ್ಯ ಇದೆಯೇ? ಎಂಬ ಪ್ರಶ್ನೆ ಉಳಿದಿದೆ.

ಇದರ ಮಧ್ಯೆಯೂ ಸಹಾಯಕ ಕೋಚ್ ಸ್ಥಾನಕ್ಕೆ ಮತ್ತೊಬ್ಬರ ನೇಮಕದ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಹಾಗಾದರೆ ಈ ಅಸಿಸ್ಟೆಂಟ್ ಕೋಚ್ ಸ್ಥಾನಕ್ಕೆ ಯಾರು ಆಯ್ಕೆಯಾಗುತ್ತಾರೆ? ಇದಕ್ಕೆ ಸೂಕ್ತವಾದ ಹೆಸರನ್ನು ಸೂಚಿಸಿದ್ದಾರೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು. ಅಭಿಷೇಕ್ ನಾಯರ್ ಸ್ಥಾನಕ್ಕೆ ಭಜ್ಜಿ ಸೂಚಿಸಿದ ಹೆಸರು ಬೇರೆ ಯಾವುದೂ ಅಲ್ಲ, ಆಶಿಶ್ ನೆಹ್ರಾ. ಸಹಾಯಕ ಕೋಚ್ ಸ್ಥಾನಕ್ಕೆ...