ಭಾರತ, ಫೆಬ್ರವರಿ 10 -- Waqf Board's authority: ಸಂಸತ್‌ನಲ್ಲಿ ವಕ್ಫ್‌ ಮಂಡಳಿ ಅಧಿಕಾರಕ್ಕೆ ಸಂಬಂಧಿಸಿ ಕಾನೂನು ಜಾರಿಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಇದೇ ವೇಳೆ, ವಕ್ಫ್‌ನ ಅಧಿಕಾರ ವ್ಯಾಪ್ತಿಯನ್ನು ಕರ್ನಾಟಕ ಹೈಕೋರ್ಟ್‌ ಪ್ರಶ್ನಿಸಿರುವುದು ಗಮನಸೆಳೆದಿದೆ. ಕರ್ನಾಟಕ ವಕ್ಫ್‌ ಮಂಡಳಿಯು ಮುಸ್ಲಿಂ ದಂಪತಿಗೆ ವಿವಾಹ ಮತ್ತು ವಿಚ್ಛೇದನ ಪ್ರಮಾಣಪತ್ರ ವಿತರಿಸುತ್ತಿದ್ದು, ಅವುಗಳ ಮಾನ್ಯತೆ ಹಾಗೂ ಮಂಡಳಿಯ ಅಧಿಕಾರ ವ್ಯಾಪ್ತಿಯ ಬಗ್ಗೆ ಕರ್ನಾಟಕ ಹೈಕೋರ್ಟ್‌ ಇಂದು (ಫೆ 10) ಸಂದೇಹ ವ್ಯಕ್ತಪಡಿಸಿದೆ. ಕರ್ನಾಟಕ ಸರ್ಕಾರ 2023ರ ಆಗಸ್ಟ್ 30 ರಂದು ಹೊರಡಿಸಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿದ ಕರ್ನಾಟಕ ಹೈಕೋರ್ಟ್‌ ಈ ಸಂದೇಹವನ್ನು ವ್ಯಕ್ತಪಡಿಸಿತು.

ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌ವಿ ಅಂಜರಿಯಾ ಮತ್ತು ನ್ಯಾಯಮೂರ್ತಿ ಎಂಐ ಆರುಣ್‌ ಅವರಿದ್ದ ನ್ಯಾಯಪೀಠವು ಸೋಮವಾರ (ಫೆ 10) ಕರ್ನಾಟಕ ವಕ್ಫ್ ಮಂಡಳಿಯ ಅಧಿಕಾರ ವ್ಯಾಪ್ತಿಯನ್ನು ಪ್ರಶ್ನಿಸಿದ್ದು, ಅದು ಮುಸ್ಲಿಂ ದಂಪತಿಗೆ ವಿತರಿಸಿದ ವಿವಾಹ ಮತ್ತು ...