ಭಾರತ, ಫೆಬ್ರವರಿ 6 -- Ayodhya Vande Bharat: ದೇಶಾದ್ಯಂತ ವಿವಿಧ ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಇತರೆ ರೈಲುಗಳಿಗೆ ಹೋಲಿಸಿದರೆ ಈ ರೈಲು ಬಹಳ ವೇಗವಾಗಿ ಪ್ರಯಾಣಿಕರನ್ನು ಗಮ್ಯಸ್ಥಾನಕ್ಕೆ ತಲುಪಿಸುತ್ತದೆ. ಅಷ್ಟೇ ಅಲ್ಲ, ಹೆಚ್ಚುವರಿ ಪ್ರಯಾಣಿಕ ಸೌಕರ್ಯಗಳನ್ನು ಒಳಗೊಂಡಿದೆ. ನೀವು ವಂದೇ ಭಾರತ್ ರೈಲಲ್ಲಿ ಅಯೋಧ್ಯೆ ರಾಮ ಮಂದಿರಕ್ಕೆ ಹೋಗ ಬಯಸುತ್ತೀರಾದರೆ, ಖಚಿತವಾಗಿಯೂ ಹೋಗಿ ಬರಬಹುದು. ವಂದೇ ಭಾರತ್ ರೈಲಿನಲ್ಲಿ ಅಯೋಧ್ಯೆಗೆ ಹೋಗಿ, ಬಾಲರಾಮನ ದರ್ಶನ ಪಡೆದು ಬನ್ನಿ ಎಂದು ಭಾರತೀಯ ರೈಲ್ವೆ ಆಹ್ವಾನಿಸುತ್ತಿದೆ. ಈ ರೈಲು ಎಲ್ಲಿಂದ ಅಯೋಧ್ಯೆಗೆ ಸಂಚರಿಸುತ್ತದೆ, ವೇಳಾಪಟ್ಟಿ, ಟಿಕೆಟ್ ದರ ಮುಂತಾದ ವಿವರ ಇಲ್ಲಿದೆ ಗಮನಿಸಿ.

ದೆಹಲಿಯಿಂದ ಅಯೋಧ್ಯೆಗೆ ರೈಲಿನಲ್ಲಿ ಸಂಚರಿಸಬಹುದು. ಹೌದು, ದೆಹಲಿಯ ಆನಂದ ವಿಹಾರ್ ಟರ್ಮಿನಸ್‌ನಿಂದ ಅಯೋಧ್ಯೆಗೆ ವಂದೇ ಭಾರತ್ ರೈಲು ಸಂಚಾರವಿದೆ. ಬುಧವಾರ ಹೊರತು ಪಡಿಸಿ ವಾರದ ಉಳಿದೆಲ್ಲ ದಿನಗಳಲ್ಲೂ ಅಯೋಧ್ಯೆ ವಂದೇ ಭಾರತ್ ರೈಲು ಆನಂದ ವಿಹಾರ್‌ನಿಂದ ಬೆಳಿಗ್ಗೆ 6.10ಕ್ಕೆ ಹೊರಡ...