ದೆಹಲಿ, ಮೇ 10 -- ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ, 18ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಯ ಕೊನೆಯ ಹಂತದ ಪಂದ್ಯಗಳನ್ನು ಒಂದು ವಾರಗಳ ಕಾಲ ಮುಂದೂಡಲಾಗಿದೆ. ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸುವ ಮೂಲಕ ಆಟಗಾರರನ್ನು ಧರ್ಮಶಾಲಾದ ಎಚ್‌ಪಿಸಿಎ ಕ್ರೀಡಾಂಗಣದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಎರಡೂ ತಂಡಗಳ ಆಟಗಾರರು ಮಾತ್ರವಲ್ಲದೆ, ಸಿಬ್ಬಂದಿ, ಬಿಸಿಸಿಐ ಕಾರ್ಯಾಚರಣೆ ಸಿಬ್ಬಂದಿ ಮತ್ತು ಪ್ರಸಾರ ಮತ್ತು ನಿರ್ಮಾಣ ಸಿಬ್ಬಂದಿ ಹೀಗೆ ಎಲ್ಲರನ್ನೂ ವಂದೇ ಭಾರತ್ ವಿಶೇಷ ರೈಲಿನ ಮೂಲಕ ಬಿಸಿಸಿಐ ನವದೆಹಲಿಗೆ ಕರೆತಂದಿದೆ.
ಐಪಿಎಲ್ ಹಂಚಿಕೊಂಡ ವಿಡಿಯೋದಲ್ಲಿ ಈ ಎಲ್ಲಾ ದೃಶ್ಯಗಳನ್ನು ತೋರಿಸಲಾಗಿದೆ. ವಿಡಿಯೋದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪಿನ್ನರ್ ಕುಲ್ದೀಪ್ ಯಾದವ್ ಮಾತನಾಡಿದ್ದು, ಪಂದ್ಯವನ್ನು ಕೈಬಿಟ್ಟ ನಂತರ ಸುರಕ್ಷಿತವಾಗಿ ದೆಹಲಿ ತಲುಪುವುದನ್ನು ಖಚಿತಪಡಿಸಿದ್ದಕ್ಕಾಗಿ ಬಿಸಿಸಿಐ ಮತ್ತು ಭಾರತೀಯ ರೈಲ್ವೆಗೆ ಅ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.