ಭಾರತ, ಏಪ್ರಿಲ್ 25 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 24ರ ಸಂಚಿಕೆಯಲ್ಲಿ ಮೊಮ್ಮಗಳ ಎದುರು ತಾನು ಇಲ್ಲಿಂದಲೇ ಊರಿಗೆ ಹೊರಡುತ್ತಿದ್ದೇನೆ ಎಂದು ಹೇಳುತ್ತಾರೆ ಲಲಿತಾದೇವಿ. ಅಜ್ಜಿ ಊರಿಗೆ ಹೋಗುತ್ತಿರುವ ವಿಚಾರ ಶ್ರಾವಣಿಗೆ ಕಣ್ಣೀರು ತರಿಸುತ್ತದೆ. ಮೊಮ್ಮಗಳನ್ನು ಸಮಾಧಾನ ಮಾಡುವ ಲಲಿತಾದೇವಿ 'ಸಾಲಿಗ್ರಾಮ ಏನು ಮೈಲಿ ದೂರದಲ್ಲಿ ಇಲ್ಲ. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ನಿನ್ನ ಕಣ್ಣ ಮುಂದೆ ನಾನು ಇರ್ತೀನಿ. ನಿಮ್ಮ ಮನೆಗೆ ಬರುವ ಸಮಯ ಕೂಡಿ ಬರುತ್ತೆ, ಆಗ ಖಂಡಿತ ಬರ್ತೀನಿ' ಎಂದು ಹೇಳುತ್ತಾರೆ. ಅತ್ತೆಯನ್ನು ಬೀಳ್ಕೊಟ್ಟ ನಂತರ ಮಗಳ ಬಳಿ ಆಸ್ತಿ ಪಡೆಯೋದು ಅಂದ್ರೆ ತಮಾಷೆಯಲ್ಲ. ಅದು ದೊಡ್ಡ ಯಜಮಾನರು ಕಷ್ಟಪಟ್ಟು ಸಂಪಾದನೆ ಮಾಡಿದ್ದು. ಅದಕ್ಕೊಂದು ಘನತೆ, ಗೌರವ ಇದೆ. ಅದನ್ನು ಉಳಿಸಿಕೊಂಡು ಹೋಗಬೇಕು ಎಂದು ಬುದ್ಧಿಮಾತು ಹೇಳುತ್ತಾರೆ. ಅಪ್ಪನ ಮಾತಿಗೆ ತಲೆ ಅಲ್ಲಾಡಿಸುವ ಶ್ರಾವಣಿ ಸುಬ್ಬು ಜೊತೆ ತವರು ಮನೆಯ ಕಾರಿನಲ್ಲಿ ಹೊರಡುತ್ತಾಳೆ.

ಕಾರಲ್ಲಿ ಹೋಗುವಾಗಲೂ ಶ್ರಾವಣಿ ಮೇಲೆ ಕೋಪ ಮಾಡಿಕೊಂಡಿರುವ ಸುಬ್ಬುವನ್ನು ನಗ...