Bengaluru, ಫೆಬ್ರವರಿ 3 -- Sonu Nigam Hospitalised: ಖ್ಯಾತ ಗಾಯಕ ಸೋನು ನಿಗಂ ತಮ್ಮ ಮಧುರ ಕಂಠದ ಮೂಲಕವೇ ಇಡೀ ದೇಶದ ಮನಗೆದ್ದಿದ್ದಾರೆ. ಸಂಗೀತ ಲೋಕದಲ್ಲಿ ಯಾರೂ ಅಳಿಸದ ಹಲವು ದಾಖಲೆಗಳನ್ನೂ ಬರೆದಿದ್ದಾರೆ ಈ ಗಾಯಕ. ಇದೀಗ ಇದೇ ಸಿಂಗರ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಲೈವ್‌ ಕಾನ್ಸರ್ಟ್‌ ಮುಗಿಯುತ್ತಿದ್ದಂತೆ, ಅತೀವ ಬೆನ್ನು ನೋವಿನ ಹಿನ್ನೆಲೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದಾರೆ.

ಲೈವ್‌ ಕಾನ್ಸರ್ಟ್‌ಗೂ ಮೊದಲೇ ಅತಿಯಾದ ಬೆನ್ನು ನೋವಿನಿಂದ ಬಳಲುತ್ತಿದ್ದ ಸೋನು ನಿಗಂ, ಯಾವುದೇ ಕಾರಣಕ್ಕೂ ಸಂಗೀತ ಕಾರ್ಯಕ್ರಮ ನಿಲ್ಲಬಾರದು ಎಂಬ ಕಾರಣಕ್ಕೆ, ಅದೇ ನೋವಿನಲ್ಲಿಯೇ ವೇದಿಕೆ ಮೇಲೆ ಹಾಡಿನ ಮೂಲಕ ಎಲ್ಲರನ್ನು ರಂಜಿಸಿದ್ದಾರೆ. ಶೋ ಮುಗಿಯುತ್ತಿದ್ದಂತೆ, ಆಸ್ಪತ್ರೆಗೆ ದಾಖಲಾಗಿದ್ದಾರೆ. ಲೈವ್‌ ಕಾನ್ಸರ್ಟ್‌ಗೂ ಮುನ್ನದ ಬೆನ್ನು ನೋವಿನ ವಿಡಿಯೋ ಮತ್ತು ಶೋ ಮುಗಿದ ಬಳಿಕದ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ ಸೋನು ನಿಗಮ್.

ಇದನ್ನೂ ಓದಿ: ಎರಡು ದಿನಗಳಲ್ಲಿ ಒಟಿಟಿ ಪ್ರವ...