ಭಾರತ, ಏಪ್ರಿಲ್ 19 -- ಕೆಲ ವರ್ಷಗಳ ಹಿಂದೆ ಕಿರುತೆರೆಯಲ್ಲಿ ಆಗಾಗ ಲೈಫ್‌ಬಾಯ್‌ ಸೋಪಿನ ಜಾಹೀರಾತೊಂದು ಕಾಣಿಸುತ್ತಿತ್ತು. ಅದರಲ್ಲಿ "ಬಂಟಿ ನಿನ್ನ ಸೋಪು ಸ್ಲೋನಾ? ಎಂದು ಹುಡುಗಿಯೊಬ್ಬಳು ತನ್ನ ಸಹಪಾಠಿಗೆ ಅಣಕ ಮಾಡುತ್ತಿದ್ದಳು. ಈಗ ಇದೇ ಹುಡುಗಿ ದಂತದ ಗೊಂಬೆಯಂತಾಗಿದ್ದಾಳೆ.

ದಶಕದ ಹಿಂದೆ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಲೈಫ್‌ಬಾಯ್‌ ಜಾಹೀರಾತಿನಲ್ಲಿ ಈ ಪೋರಿ ಕಾಣಿಸಿಕೊಂಡಿದ್ದಳು. ಈಗ ವರ್ಷಗಳು ಉರುಳಿವೆ. ದಿನಗಳು ಬದಲಾಗಿವೆ. ಅಂದಿನ ಆ ಪುಟ್ಟ ಬೇಬಿ ಈಗ ಹಾಟ್‌ ಬೇಬಿ ಆಗಿದ್ದಾಳೆ.

ಹೌದು, ಅಂದಿನ ಪುಟ್ಟ ಹುಡುಗಿಯ ಹೆಸರು ಅವ್ನೀತ್ ಕೌರ್‌. ಈಗ ಸೋಷಿಯಲ್‌ ಮೀಡಿಯಾದಲ್ಲೂ ಪ್ರಭಾವಿಯಾಗಿ ಬೆಳೆದು, ಯಾವ ಸೆಲೆಬ್ರಿಟಿಗೂ ಕಮ್ಮಿ ಇಲ್ಲ ಎಂಬಂತೆ ಮಿಂಚುತ್ತಿರುತ್ತಾರೆ.

ಇನ್‌ಸ್ಟಾಗ್ರಾಂನಲ್ಲಿ ಬರೋಬ್ಬರಿ 31 ಮಿಲಿಯನ್‌ (3 ಕೋಟಿಗೂ ಅಧಿಕ) ಫಾಲೋವರ್ಸ್‌ ಹೊಂದಿರುವ ಈ ಬೆಡಗಿ, ತಮ್ಮಅಂದ ಚೆಂದದ ಮೂಲಕವೇ ಆಗಾಗ ವೈರಲ್‌ ಆಗುತ್ತಿರುತ್ತಾರೆ.

ಬಾಲಕಿಯಾಗಿದ್ದಾಗಲೇ ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದ ಅವ್ನೀತ್ ಕೌರ್, ಬಾಲಿ...