ಭಾರತ, ಫೆಬ್ರವರಿ 6 -- ಈಗೀಗ ಹಲವರು ಜಡ ಜೀವನಶೈಲಿಯನ್ನು ಅನುಸರಿಸುತ್ತಿದ್ದಾರೆ. ದೀರ್ಘಕಾಲದವರೆಗೆ ಕುಳಿತು ಕೆಲಸ ಮಾಡುವುದು ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಇದರಿಂದ ಮನುಷ್ಯರಲ್ಲಿ ದೈಹಿಕ ಶ್ರಮ ಕಡಿಮೆಯಾಗುತ್ತಿದೆ. ದೀರ್ಘಾವಧಿಯವರೆಗೆ ಕುಳಿತು ಕೆಲಸ ಮಾಡುವುದರಿಂದ ಬೆನ್ನುನೋವು ಸೇರಿದಂತೆ ಸಾಕಷ್ಟು ತೊಂದರೆಗಳು ಎದುರಾಗುತ್ತಿವೆ.

ಇದು ಲೈಂಗಿಕ ಜೀವನದಲ್ಲಿ ತೊಂದರೆ ಎದುರಾಗುವಂತೆಯೂ ಮಾಡುತ್ತಿದೆ. ದಂಪತಿಗಳ ಲೈಂಗಿಕ ಜೀವನದ ಮೇಲೆ, ವಿಶೇಷವಾಗಿ ಮಹಿಳೆಯರ ದೈಹಿಕ ಯೋಗಕ್ಷೇಮದ ಮೇಲೆ ಹೆಚ್ಚು ಪರಿಣಾಮ ಬೀರಬಹುದು. ನೀವು ಕೂಡ ಜಡ ಜೀವನಶೈಲಿ ಅನುಸರಿಸುತ್ತಿದ್ದು, ಲೈಂಗಿಕ ಜೀವನದಲ್ಲಿ ಅತೃಪ್ತರಾಗಿದ್ದರೆ ಮಂಡೂಕಾಸನವು ನಿಮಗೆ ಸಹಾಯ ಮಾಡುತ್ತದೆ.

ಮಂಡೂಕಾಸನವನ್ನು ಕಪ್ಪೆ ಭಂಗಿ ಎಂದೂ ಕರೆಯುತ್ತಾರೆ. ಈ ಆಸನವು ದೇಹದಲ್ಲಿ ಚಲನಶೀಲತೆಯನ್ನು ಹೆಚ್ಚಿಸಲು ಮತ್ತು ಭಂಗಿಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಇದು ವಿಶೇಷವಾಗಿ ಲೈಂಗಿಕ ಜೀವನದಲ್ಲಿ ತೊಂದರೆಗಳನ್ನು ಎದುರಿಸುತ್ತಿರುವ ಮಹಿಳೆಯರಿಗೆ ತುಂಬಾ ಪ್ರಯೋಜನಕಾರಿ. ಮ...