ಭಾರತ, ಜುಲೈ 10 -- ಕ್ರಿಕೆಟ್ ಕಾಶಿ ಲಾರ್ಡ್ಸ್​ ಕ್ರಿಕೆಟ್ ಮೈದಾನದಲ್ಲಿ (Lords Cricket Stadium) ನಡೆಯುತ್ತಿರುವ ಆ್ಯಂಡರ್ಸನ್-ತೆಂಡೂಲ್ಕರ್ ಟ್ರೋಫಿಯ (Anderson - Tendulkar Trophy) 3ನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ವಿರುದ್ಧ ಟಾಸ್ ಜಯಿಸಿದ ಇಂಗ್ಲೆಂಡ್ (England) ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಎಡ್ಜ್​ಬಾಸ್ಟನ್​ನಲ್ಲಿ ಜರುಗಿದ 2ನೇ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ಶುಭ್ಮನ್ ಗಿಲ್ ನೇತೃತ್ವದ ಭಾರತ ತಂಡ, ಸರಣಿಯಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಸಜ್ಜಾಗಿದೆ. ಅದಕ್ಕಾಗಿ ಆಡುವ 11ರ ಬಳಗದಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ಕಳಪೆ ಪ್ರದರ್ಶನ ನೀಡಿದ ವೇಗಿ ಪ್ರಸಿದ್ಧ್ ಕೃಷ್ಣ ಬದಲಿಗೆ ಜಸ್ಪ್ರೀತ್ ಬುಮ್ರಾಗೆ ಮಣೆ ಹಾಕಲಾಗಿದೆ.

ಮತ್ತೊಂದೆಡೆ ಪಂದ್ಯದ ಆರಂಭಕ್ಕೆ ಒಂದು ದಿನ ಮುಂಚೆಯೇ ಆಡುವ 11ರ ಬಳಗ ಘೋಷಿಸಿದ್ದ ಇಂಗ್ಲೆಂಡ್ ತನ್ನ ತಂಡದಲ್ಲೂ ಒಂದು ಬದಲಾವಣೆ ಮಾಡಿದೆ. ಜೋಶ್ ಟಂಗ್ ಬದಲಿಗೆ ಜೋಫ್ರಾ ಆರ್ಚರ್ ಅವರಿಗೆ ಸ್ಥಾನ ನೀಡಲಾಗಿದೆ. ಆರ್ಚರ್ ನಾಲ್ಕು ವರ್ಷಗಳ ...