ಭಾರತ, ಮಾರ್ಚ್ 24 -- ಬಿಗ್ ಬಾಸ್ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಈ ಹಿಂದೆ ಒಂದು ವಿಡಿಯೋ ಪೋಸ್ಟ್‌ ಮಾಡಿದ್ದರು. ವಿಡಿಯೋದಲ್ಲಿ ಲಾಂಗ್ ಹಿಡಿದುಕೊಂಡು ಕೆಲವು ದೃಶ್ಯಗಳನ್ನು ಚಿತ್ರೀಕರಿಸಿದ್ದರು. ಈ ವಿಡಿಯೋವನ್ನು ಸಾಕಷ್ಟು ಜನ ಇಷ್ಟಪಟ್ಟಿದ್ದರು ಇನ್ನು ಕೆಲವರು ವಿರೋಧಿಸಿದ್ದರು. ಕೆಲವರಿಗೆ ವಿಡಿಯೋ ತುಂಬಾ ಹಿಡಿಸಿದ್ದು, ನಮ್ಮಲ್ಲೇ ಇಂತಹ ಕಲಾವಿದರಿದ್ದಾರೆ. ವಿಲನ್ ಪಾತ್ರವನ್ನು ನಿಭಾಯಿಸಬಲ್ಲ ಇವರಿಗೆಲ್ಲ ಅವಕಾಶ ಸಿಗಬೇಕು ಎಂದೆಲ್ಲ ಕಾಮೆಂಟ್ ಮಾಡಿದವರೂ ಇದ್ದಾರೆ. ಇನ್ನು ವಿಡಿಯೋದಲ್ಲಿ ರಜತ್ ತೊಟ್ಟ ಬಟ್ಟೆಯ ಮೇಲೆ ಡಿ ಬಾಸ್‌ ಎಂದು ಬರೆದಿತ್ತು. ಅದನ್ನು ಕಂಡ ಇನ್ನೊಂದಷ್ಟು ಜನ ಜೈ ಡಿ ಬಾಸ್ ಎನ್ನುತ್ತಾ ಕಾಮೆಂಟ್ ಮಾಡಿದ್ದರು.

ಆದರೆ ವಿಡಿಯೋ ಮಾಡಿದ ರಜತ್ ಹಾಗೂ ವಿನಯ್ ಗೌಡ ವಿರುದ್ಧ ದೂರು ದಾಖಲಾಗಿದೆ. ರೀಲ್ಸ್‌ನಲ್ಲಿ ಇವರಿಬ್ಬರು ಲಾಂಗ್ ಹಿಡಿದುಕೊಂಡ ಕಾರಣ ಇದು ಸಾಮಾಜಿಕ ಶಾಂತಿಯನ್ನು ಹಾಳು ಮಾಡುತ್ತದೆ ಎಂದು ಹೇಳಲಾಗಿದ್ದು. ಇವರಿಬ್ಬರ ಮೇಲೆ FIR ದಾಖಲಿಸಲಾಗಿದೆ.

ಇದನ್ನೂ ಓದಿ: OTT Trending Movies: ಒ...