ಭಾರತ, ಏಪ್ರಿಲ್ 27 -- ಲಾಂಗ್‌ ಡ್ರೈವ್‌ ಇರುವ 2-3 ದಿನಗಳ ಮುಂಚಿತವಾಗಿ ಲಾಂಗ್ ಡ್ರೈವ್‌ಗೆ ನೀವು ಮಾನಸಿಕವಾಗಿ ತಯಾರಿ ನಡೆಸಬೇಕು. ವಿಶೇಷವಾಗಿ ಡ್ರೈವ್‌ಗೆ ಎರಡು ದಿನಗಳ ಮೊದಲು ಕನಿಷ್ಠ 7-8 ಗಂಟೆಗಳ ಕಾಲ ಮಲಗಿ ನಿದ್ದೆ ಮಾಡಬೇಕು, ಇದು ತುಂಬಾ ಅವಶ್ಯಕ. ನಿದ್ದೆ ಕಡಿಮೆಯಾದರೆ ಡ್ರೈವಿಂಗ್‌ ಕಷ್ಟವಾಗುತ್ತದೆ.

ಲಾಂಗ್ ಡ್ರೈವ್‌ ಇರುವಾಗ ನೀವು ತಿಂಡಿ ಖರೀದಿಸುತ್ತೀರಿ. ಅವುಗಳೊಂದಿಗೆ ಆರೋಗ್ಯಕರ ಆಹಾರವನ್ನು ಕೂಡಾ ಪ್ಯಾಕ್ ಮಾಡಿಕೊಂಡಿರಿ. ಬಾದಾಮಿ ಮತ್ತು ವಾಲ್ನಟ್‌ಗಳಂತಹ ಒಣ ಹಣ್ಣುಗಳು ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತವೆ.

ಲಾಂಗ್ ಡ್ರೈವ್‌ ಸಮಯದಲ್ಲಿ ಚಾಲಕರು ಮರೆತುಬಿಡುವ ವಿಷಯವೆಂದರೆ ಸರಿಯಾಗಿ ನೀರು ಸೇವನೆ ಮಾಡುವುದು. ದೇಹವು ಹೈಡ್ರೇಟ್ ಆಗಿ ಉಳಿಯುವುದು ಬಹಳ ಮುಖ್ಯ. ಹೀಗಾಗಿ ಕಾಲಕಾಲಕ್ಕೆ ನೀರನ್ನು ಕುಡಿಯಿರಿ. ಇದು ನಿಮ್ಮ ದೇಹ ಅಲರ್ಟ್‌ ಆಗಿರುವಂತೆ ಮಾಡುತ್ತದೆ. ಜೊತೆಗೆ ಆಯಾಸ ಕಡಿಮೆ ಮಾಡುತ್ತದೆ..

ನಿಮ್ಮ ಲಾಂಗ್‌ ಡ್ರೈವ್ ನಗರದಲ್ಲಿ ಪ್ರಾರಂಭವಾಗುವುದಾದರೆ, ನೀವು ಆದಷ್ಟು ಬೇಗ ಡ್ರೈವ್‌ ಆರಂಭಿಸುವುದು ಒಳ್ಳೆ...