Bengaluru, ಮಾರ್ಚ್ 24 -- ಬೆಂಗಳೂರು: ಕೈಯಲ್ಲಿ ಲಾಂಗ್‌ ಹಿಡಿದು ನಟ ದರ್ಶನ್‌ ಅವರ ಕರಿಯ ಸಿನಿಮಾದ ಟ್ಯೂನ್‌ಗೆ ಪೋಸ್‌ ನೀಡಿದ್ದ ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ವಿನಯ್‌ ಗೌಡ ಮತ್ತು ಸೀಸನ್‌ 11ರ ರಜತ್‌ ಕಿಶನ್‌ ಇಬ್ಬರನ್ನು ಸೋಮವಾರ (ಮಾ. 24) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿತ್ತು. ಇಬ್ಬರಿಗೂ ನೋಟೀಸ್‌ ಸಹ ನೀಡಲಾಗಿತ್ತು.

ಇದೇ ಕೇಸ್‌ ವಿಚಾರವಾಗಿ ವಿಚಾರಣೆಗೆಂದು ಇದೀಗ ಈ ಇಬ್ಬರನ್ನು ಠಾಣೆಗೆ ಕರೆತರಲಾಗಿದೆ. ಕೇಸ್‌ ದಾಖಲಾದ ಬಳಿಕ, ರಜತ್‌ ಅವರ ಫೋನ್‌ ಸ್ವಿಚ್ ಆಫ್‌ ಆಗಿತ್ತು. ಅವರು ಕೊಪ್ಪಳದಲ್ಲಿ ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾರೆ ಎಂದು ರಜತ್‌ ಪತ್ನಿ ಅಕ್ಷಿತಾ ಪೊಲೀಸ್‌ ಠಾಣೆಗೆ ಆಗಮಿಸಿದ್ದರು. ಈಗ ಅಚ್ಚರಿಯ ರೀತಿಯಲ್ಲಿ ಇಬ್ಬರೂ ವಿಚಾರಣೆಗೆ ಹಾಜರಾಗಿದ್ದಾರೆ.

ಇದನ್ನೂ ಓದಿ: ಲಾಂಗ್ ಹಿಡಿದು ರೀಲ್ಸ್‌ ಮಾಡಿದ ಬಿಗ್ ಬಾಸ್‌ ಖ್ಯಾತಿಯ ವಿನಯ್ ಗೌಡ ಹಾಗೂ ರಜತ್ ಮೇಲೆ FIR

ರಜತ್‌ ಕಿಶನ್‌, ತಮ್ಮ ಶರ್ಟ್‌ ಮೇಲೆ ಡಿ ಬಾಸ್‌ ಎಂದು ಬರ...